ಸೆಪ್ಟೆಂಬರ್ ನಿಂದ ಶಾಲೆಗಳ ಪುನರಾರಂಭ ಮಾಡುವುದಿಲ್ಲ ➤ ಸುರೇಶ್ ಕುಮಾರ್ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಮಂಡ್ಯ ಆ.13. ಕೊರೋನಾ ಭೀತಿಯ ನಡುವೆಯೂ  ರಾಜ್ಯದಲ್ಲಿ ಸೆಪ್ಟೆಂಬರ್​​​​​​ನಿಂದ ಶಾಲೆಗಳ ಪುನರಾರಂಭ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಬಗ್ಗೆ ಗೊಂದಲಗಳು ಸಹ ಮೂಡಿವೆ. ಇದರ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ಕುಮಾರ್ಸ್ಪಷ್ಟೀಕರಣ ನೀಡಿದ್ದಾರೆ

ಈ ಬಗ್ಗೆ ಮಾತನಾಡಿದ ಅವರು, ಈಗ ನಮ್ಮ ಮುಂದೆ ದೊಡ್ಡ ಸವಾಲು ಇದೆ.  ಮುಂದಿನ ಶೈಕ್ಷಣಿಕ ದಿನಗಳು ಹೇಗೆ ಎಂಬುದನ್ನು ಯೋಚನೆ ಮಾಡುವಂತಾಗಿದೆ. ಸುರೇಶ್ ಕುಮಾರ್ ಶಾಲೆ ಪ್ರಾರಂಭ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂಬ ಬಿರುದನ್ನೂ ನನಗೆ ಕೊಟ್ಟಿದ್ದಾರೆ. ಖಂಡಿತ ಯಾವುದೇ ಕಾರಣಕ್ಕೂ  ಸೆಪ್ಟೆಂಬರ್​ನಿಂದ ಶಾಲೆಗಳನ್ನು ಪ್ರಾರಂಭಿಸಲಾಗುವುದಿಲ್ಲ ಎಂದು ಸಚಿವ ಸುರೇಶ್​ ಕುಮಾರ್​ ಸ್ಪಷ್ಟಪಡಿಸಿದ್ದಾರೆ.

Also Read  ಮೂಡಬಿದಿರೆ ಸರಕಾರಿ ಶಾಲೆಯಲ್ಲಿ ಹೊರಾಂಗಣವೇ ಪಾಠದಂಗಳ ➤ ಕ್ಯಾಂಪಸ್ ಫ್ರಂಟ್ ನಿಂದ ಸ್ಥಳಕ್ಕೆ ಭೇಟಿ ಹಾಗೂ ವಿವಿಧ ಅಧಿಕಾರಿಗಳಿಗೆ ಮನವಿ

error: Content is protected !!
Scroll to Top