ಮಂಗಳೂರಿನಲ್ಲಿ ವಾರ್ಡ್ ಸಮಿತಿ ರಚನೆಗೆ ಪರಿಷತ್ ನಲ್ಲಿ ಅನುಮೋದನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.13, ಮಹಾ ನಗರ ಪಾಲಿಕೆಯ ಬಹು ನಿರೀಕ್ಷಿತ, ಜನರ ಬೇಡಿಕೆಯಾಗಿದ್ದ ವಾರ್ಡ್ ಸಮಿತಿ ರಚನೆಗೆ ಇಂದು ಪರಿಷತ್ ನಲ್ಲಿ ಅನುಮೋದನೆ ನೀಡಿದೆ.


ಮೇಯರ್ ದಿವಾಕರ್ ಪಾಂಡೇಶ್ವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ವಾರ್ಡ್ ಸಮಿತಿ ರಚನೆಗೆ ಅನುಮೋದನೆ ನೀಡಲಾಯಿತು. ಈ ಮೂಲಕ ಕಳೆದ ಹಲವು ವರ್ಷಗಳಿಂದ ಎಂಸಿಸಿ ಸಿವಿಕ್ ಗ್ರೂಪ್ ಸಹಿತ ವಿವಿಧ ಎನ್ ಜಿಓ ಗಳ ಹೋರಾಟದ ಫಲವಾಗಿ ವಾರ್ಡ್ ಸಮಿತಿ ಅಸ್ತಿತ್ವಕ್ಕೆ ಬರಲಿದೆ.

ಇದೇ ವೇಳೆ ವರ್ಷದ ಹಿಂದೆ ಪಾಲಿಕೆಯಲ್ಲಿ ಏರಿಕೆ ಮಾಡಲಾಗಿದ್ದ ನೀರಿನ ದರದಲ್ಲೂ ಇಳಿಕೆ ಮಾಡಲಾಯಿತು. ಆಸ್ತಿ ತೆರಿಗೆಯೊಂದಿಗೆ ವಿಧಿಸಲಾದ ಘನತ್ಯಾಜ್ಯ ಉಪಕರವನ್ನು 2000 ಚದರ ಅಡಿವರೆಗಿನ ಹಲವು ಹಂತಗಳಲ್ಲಿ ಇಳಿಕೆ ಮಾಡಲಾಗಿದೆ‌.

Also Read  ಶಾಸಕ ಹರೀಶ್‌ ಪೂಂಜ ರವರಿಂದ ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರ ವಿತರಣೆ

error: Content is protected !!
Scroll to Top