ಸರಸ್ವತೀ ವಿದ್ಯಾಲಯ ಪ್ರೌಢ ಶಾಲೆಗೆ 75 ಶೇಕಡ ಫಲಿತಾಂಶ

(ನ್ಯೂಸ್ ಕಡಬ) newskadaba.com ಕಡಬ, : ಆ.13, ಕಡಬದ ಸರಸ್ವತಿ ವಿದ್ಯಾಲಯ ಪ್ರೌಢ ಶಾಲೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 75 ಶೇಕಡ ಫಲಿತಾಂಶ ಬಂದಿರುತ್ತದೆ.

ನೂಜಿಬಾಳ್ತಿಲ ಗ್ರಾಮದ ಚಂದ್ರಶೇಖರ ಮತ್ತು ಗಾಯತ್ರಿ ದಂಪತಿಗಳ ಮಗಳಾದ ವಿದ್ಯಾ 582 (93.12%) ಅಂಕವನ್ನು ಪಡೆದು ಶಾಲೆಗೆ ಪ್ರಥಮ , ಕಲ್ಲುಗುಡ್ಡೆಯ ಕಿಟ್ಟು ಅಜಿಲ ಮತ್ತು ವೆಂಕಮ್ಮ ದಂಪತಿಯ ಮಗಳಾದ ಧೃತಿ.ಕೆ.ಕೆ 557(89) ಅಂಕವನ್ನು ಪಡೆದು ದ್ವಿತೀಯ, ಕೋಡಿಂಬಾಳ ನಿವಾಸಿಗಳಾದ ಚನ್ನಪ್ಪಗೌಡ ಮತ್ತು ಮೀನಾಕ್ಷಿ ದಂಪತಿಯ ಮಗಳಾದ ಪೂಜಾ.ಪಿ.ಸಿ 555(88%) ಅಂಕವನ್ನು ಪಡೆದು ತೃತೀಯ ಹಾಗೂ ಲಿಂಗಪ್ಪ ಜೆ ಮತ್ತು ಬಾಲಕಿ ದಂಪತಿಯ ಮಗಳಾದ ರಶ್ಮಿ ಜೆ 554(88.64%) ನಾಲ್ಕನೇ ಸ್ಥಾನವನ್ನು ಪಡೆದಿರುತ್ತಾರೆ. ಪರೀಕ್ಷೆಗೆ ಹಾಜರಾದ 48 ವಿದ್ಯಾರ್ಥಿಗಳಲ್ಲಿ 8 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 4 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 19 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ , ಹಾಗೂ 5 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಗಿದ್ದಾರೆ.

Also Read  ನಾರಾವಿ ಜಿಲ್ಲಾ ಪಂಚಾಯತಿ ಕ್ಷೇತ್ರ ➤ ಸ್ವಸ್ಥ ನಾರಾವಿ - ಅಭಿಯಾನಕ್ಕೆ ಚಾಲನೆ

error: Content is protected !!
Scroll to Top