ಆತೂರು: ಆಯುಷ್ಮಾನ್ ಕಾರ್ಡ್ ಅಭಿಯಾನ

(ನ್ಯೂಸ್ ಕಡಬ) newskadaba.com ಆತೂರು, ಆ.12, ಬದ್ರಿಯಾ ಜುಮಾ ಮಸೀದಿ ಆತೂರು ಹಾಗು ಎಸ್ಕೆಎಸ್ಸೆಸ್ಸೆಫ್ ಆತೂರು ಇದರ ಜಂಟಿ ಆಶ್ರಯದಲ್ಲಿ ಮಂಗಳವಾರದಂದು ಭಾರತ ಹಾಗು ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖಾ ಉಚಿತ ಚಿಕಿತ್ಸೆಯ ಆಯುಷ್ಮಾನ್ ಕಾರ್ಡ್ ಅಭಿಯಾನವು ಬದ್ರಿಯಾ ಹಾಲ್ ಆತೂರುನಲ್ಲಿ ನಡೆಯಿತು.

ಆಯಷ್ಮಾನ್ ಕಾರ್ಡ್ ಅಭಿಯಾನಕ್ಕೆ ಸೈಯದ್ ಜುನೈದ್ ಜಿಫ್ರಿ ತಂಙಳ್ ದುಆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಬದ್ರಿಯಾ ಜುಮಾ ಮಸೀದಿ ಆತೂರು ಇದರ ಅಧ್ಯಕ್ಷರಾದ ಬಿ.ಕೆ ಅಬ್ದುಲ್ ರಝಾಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಆತೂರು ರೇಂಜ್ ಇದರ ಪ್ರದಾನ ಕಾರ್ಯದರ್ಶಿ ಕೆ.ಎಮ್ ಸಿದ್ದೀಕ್ ಫೈಝಿ ಕರಾಯ, ಬದ್ರಿಯಾ ಜುಮಾ ಮಸೀದಿ ಆತೂರು ಇದರ ಕಾರ್ಯದರ್ಶಿ ಸಿರಾಜ್ ಬಡ್ಡಮೆ, ಬದ್ರಿಯಾ ಸ್ಕೂಲ್ ಮದರಸದ ಸದರ್ ಉಸ್ತಾದ್ ಹಂಝ ಸಖಾಫಿ, ಎಸ್ಕೆಎಸ್ಸೆಸ್ಸೆಫ್ ಆತೂರು ಶಾಖೆ ಅಧ್ಯಕ್ಷರಾದ ಬಿ.ರ್ ಅಬ್ದುಲ್ ಖಾದರ್, ಕಾರ್ಯದರ್ಶಿ ಸಿದ್ದೀಕ್ ನೀರಾಜೆ, ಆಡಳಿತ ಸಮಿತಿಯ ಸದಸ್ಯರು ಹಾಗು ಎಸ್ಕೆಎಸ್ಸೆಸ್ಸೆಫ್ ನ ಕಾರ್ಯಕರ್ತರು ಉಪಸ್ಥಿತರಿದ್ದರು. ಅಯುಷ್ಮಾನ್ ಕಾರ್ಡ್ ನ್ನು ಜಿ.ಎಮ್ ಮತ್ತು ಶಾಹ ಸೈಬರ್ ತಂಡದವರು ನಡೆಸಿಕೊಟ್ಟರು.

Also Read  ಮಂಗಳೂರು: ಜಲೀಲ್ ಕೊಲೆ ಪ್ರಕರಣ ➤ ಮತ್ತೋರ್ವ ಆರೋಪಿಯ ಬಂಧನ

error: Content is protected !!
Scroll to Top