ಸಂಬಂಧಿಯಿಂದ ಅವಹೇಳನಕಾರಿ ಪೋಸ್ಟ್ ➤ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.12, ವ್ಯಕ್ತಿಯೊಬ್ಬ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಧಾರ್ಮಿಕ ಅವಹೇಳನ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಕಾವಲ್‌ ಬೈರಸಂದ್ರದಲ್ಲಿರುವ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಮತ್ತು ಕಚೇರಿ ಮೇಲೆ ಉದ್ರಿಕ್ತ ಗುಂಪೊಂದು ಮಂಗಳವಾರ ರಾತ್ರಿ ದಾಳಿ ನಡೆಸಿ ಬೆಂಕಿ ಹಚ್ಚಿದೆ.

ಜತೆಗೆ ಕಾಡಗೊಂಡನಹಳ್ಳಿ ಪೊಲೀಸ್‌ ಠಾಣೆಗೆ ದಿಗ್ಬಂಧನ ಹಾಕಿರುವ ಗುಂಪು, ಶಾಸಕರು ಹಾಗೂ ಅವರ ಸಂಬಂಧಿ ನವೀನ್‌ ಮನೆ ಹಾಗೂ ಅಕ್ಕಪಕ್ಕದ ಪ್ರದೇಶಗಳಲ್ಲಿ ಬೆಂಕಿ ಹಚ್ಚಿದೆ. ಪೊಲೀಸರತ್ತ ಕಲ್ಲು ತೂರಾಟ ನಡೆಸಿರುವ ಉದ್ರಿಕ್ತರು ಆರೋಪಿ ಠಾಣೆಯಲ್ಲಿದ್ದಾನೆ ಎಂದು ಆರೋಪಿಸಿ ಕೆಲವು ಪೊಲೀಸರಿಗೆ ಹಲ್ಲೆ ನಡೆಸಿದ್ದಾರೆ. ಇದರಿಂದ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸರು ಉದ್ರಿಕ್ತರತ್ತ ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಯತ್ನಿಸಿದ್ದಾರೆ.

Also Read  ಮಂಗಳೂರು: ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಯತ್ನ; ನೈತಿಕ ಪೊಲೀಸ್ ಗಿರಿಗೆ ಕಡಿವಾಣ ಹಾಕಲು ಬಿಜೆಪಿ ಸರಕಾರ ವಿಫಲ ➤ ಶೌವಾದ್ ಗೂನಡ್ಕ

ಪೊಲೀಸ್‌ ಆಯುಕ್ತ ಕಮಲ್‌ಪಂಥ್‌, ಡಿಸಿಪಿ ಶರಣಪ್ಪ, ಹೆಚ್ಚುವರಿ ಪೊಲೀಸ್‌ ಆಯುಕ್ತರಾದ ಸೌಮೇಂದು ಮುಖರ್ಜಿ, ಎಸ್‌.ಮುರುಗನ್‌ ಹಾಗೂ ಮೀಸಲು ಪೊಲೀಸ್‌ ಪಡೆಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಶ್ರೀನಿವಾಸಮೂರ್ತಿ ಅವರ ಸಂಬಂಧಿ ನವೀನ್‌ ಎಂಬವರು ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಆಕ್ರೋಶಗೊಂಡ ಒಂದು ಕೋಮಿನ ನೂರಾರು ಜನ ರಾತ್ರಿ 10 ಗಂಟೆ ಸುಮಾರಿಗೆ ಕಾವಲ್‌ ಬೈರಸಂದ್ರದಲ್ಲಿರುವ ಶ್ರೀನಿವಾಸಮೂರ್ತಿ ಅವರ ಮನೆ ಮತ್ತು ಕಚೇರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅದನ್ನು ಚಿತ್ರೀಕರಿಸಲು ಬಂದ ಸಾರ್ವಜನಿಕರ ಮೊಬೈಲ್‌ಗ‌ಳನ್ನು ಕಿತ್ತೆಸೆದಿದ್ದಾರೆ. ಅಲ್ಲದೆ, ಆ ರಸ್ತೆಯಲ್ಲಿರುವ ಐದಾರು ದ್ವಿಚಕ್ರ ವಾಹನಗಳು ಮತ್ತು ಕಾರುಗಳ ಮೇಲೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Also Read  ನಿಮ್ಮ ಭಾಗ್ಯದಲ್ಲಿ ಸರ್ಕಾರಿ ನೌಕರಿ ಖಾಸಗಿ ಅಥವಾ ಸ್ವಂತ ಬಿಜಿನೆಸ್ ಏನಿದೆ ರೇಖೆ ಮೂಲಕ ತಿಳಿಯಿರಿ ಕಷ್ಟಗಳಿಗೆ ಪರಿಹಾರ ಪಡೆದುಕೊಳ್ಳಿ

error: Content is protected !!