ದ್ವಿತೀಯ ಪಿಯುಸಿ ಪೂರಕ ಪರೀಕ್ಷಾ ವೇಳಾಪಟ್ಟಿ ಪ್ರಕಟ ➤ ಸೆಪ್ಟೆಂಬರ್ 7ರಿಂದ 18 ರವರೆಗೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.11, ದ್ವಿತೀಯ ಪಿಯುಸಿ ಪೂರಕ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದ್ದು, ಸೆಪ್ಟೆಂಬರ್ 7ರಿಂದ 18ರವರೆಗೆ ನಡೆಯಲಿದೆ.

ಪದವಿ ಪೂರ್ವ ಪರೀಕ್ಷಾ ಮಂಡಳಿಯು ಈ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಎರಡು ಅವಧಿಯಲ್ಲಿ ಪರೀಕ್ಷೆ ನಡೆಯಲಿದ್ದು, ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ಹಾಗೂ ಮಧ್ಯಾಹ್ನ 2.15ರಿಂದ 5.30ರ ವರೆಗೆ ಪರೀಕ್ಷೆ ನಡೆಯಲಿದೆ. ಸೆಪ್ಟೆಂಬರ್ 7 ರಂದು ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರ ವರೆಗೆ ಉರ್ದು, ಸಂಸ್ಕೃತ, ಮಧ್ಯಾಹ್ನ 2.15ರಿಂದ 5.30ರ ವರೆಗೆ ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆ್ಯಂಡ್ ವೆಲ್‍ನೆಸ್, ಹೋಮ್ ಸೈನ್, ಸೆ.8ರಂದು ಬೆಳಗ್ಗೆ ಇತಿಹಾಸ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ, ಸೆ.9ರಂದು ಬೆಳಗ್ಗೆ ಹಿಂದಿ, ಮಧ್ಯಾಹ್ನ ತಮಿಳು, ತೆಲುಗು, ಮಳಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್ ಪರೀಕ್ಷೆಗಳು ನಡೆಯಲಿವೆ.

Also Read  ಕಳಪೆ ರಸ್ತೆಯಿಂದ ಸಾವು-ನೋವು ಸಂಭವಿಸಿದರೆ ಪೊಲೀಸ್ ಠಾಣೆಗೆ ದೂರು ನೀಡಿ..!  ➤ ಹೈಕೋರ್ಟ್ ನಿಂದ ಆದೇಶ     

error: Content is protected !!
Scroll to Top