ಕೊರೋನಾದಿಂದ ಚೇತರಿಕೆ ಕಂಡ ಬಿ ಎಸ್ ವೈ ➤ ನಾಳೆಯೇ ಆಸ್ಪತ್ರೆಯಿಂದ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 10, ಸಿಎಂ ಬಿ.ಎಸ್‌‌. ಯಡಿಯೂರಪ್ಪರವರಿಗೆ ಪುನಃ ಕೊರೋನಾ ಪರೀಕ್ಷೆ ಮಾಡಲಾಗಿದ್ದು, ಪರೀಕ್ಷಾ ವರದಿಯಲ್ಲಿ ನೆಗೆಟಿವ್‌‌ ಬಂದಿದೆ.

ಸಿಎಂ ಬಿಎಸ್‌ವೈ ಅವರಿಗೆ ಕಳೆದ ವಾರದಂದು ಕೊರೋನಾ ಸೋಂಕು ತಗುಲಿದ್ದ ಕಾರಣ ಅವರು ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಚೇತರಿಸಿಕೊಂಡಿದ್ದಾರೆ. ಇದೀಗ ಅವರಿಗೆ ನಡೆಸಿದ ಕೊರೋನಾ ಪರೀಕ್ಷಾ ವರದಿಯಲ್ಲಿ ನೆಗೆಟಿವ್‌ ಬಂದರೆ, ಅವರು ಶೀಘ್ರವೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವರದಿಯಲ್ಲಿ ಅವರಿಗೆ ಕೊರೊನಾ ನೆಗೆಟಿವ್‌ ಬಂದಿದೆ. ಅವರಿಗೆ ಸೋಂಕಿನ ಯಾವುದೇ ಲಕ್ಷಣಗಳಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

Also Read  ಕಡಬ: ಯುವಜನ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

error: Content is protected !!
Scroll to Top