ಆಯುಷ್ಮಾನ್ ಭಾರತ್ ಕಾರ್ಡ್ ಅಭಿಯಾನ ➤ ಪಿಎಫ್ಐ ನೆಲ್ಯಾಡಿ ವಲಯದ ವತಿಯಿಂದ ಅರ್ಹ ಫಲಾನುಭವಿಗಳಿಗೆ ವಿತರಣೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ. 10, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನೆಲ್ಯಾಡಿ ವಲಯದ ವತಿಯಿಂದ ಆಯುಷ್ಮಾನ್ ಭಾರತ್ ಕಾರ್ಡ್ ಯೋಜನೆಯನ್ನು ಪರಿಸರದ ಅರ್ಹ ಮುನ್ನೂರಕ್ಕಿಂತಲೂ ಹೆಚ್ಚಿನ ಫಲಾನುಭವಿಗಳಿಗೆ ನೀಡುವ ಮೂಲಕ ಸಾಮಾಜಿಕ ಕಾರ್ಯ ಮೆರೆದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೆಡಿಕಲ್ ಉಸ್ತುವಾರಿ ಮತ್ತು ಜಿಲ್ಲಾ ಸಮಿತಿ ಸದಸ್ಯರಾದ ಸಿದ್ದೀಕ್ ನೆಲ್ಯಾಡಿ ಆಯುಷ್ಮಾನ್ ಭಾರತ್ ಕಾರ್ಡ್ ಯೋಜನೆಯ ಕುರಿತು ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪಿಎಫ್ಐ ನೆಲ್ಯಾಡಿ ವಲಯಾಧ್ಯಕ್ಷರಾದ ಸಿದ್ದೀಕ್ ಮಣ್ಣಗುಂಡಿ ಮಾತನಾಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯು ದೇಶವ್ಯಾಪಿ ಸಾಮಾಜಿಕವಾಗಿ ಎಲ್ಲಾ ರಂಗಗಳಲ್ಲೂ ಮುಂಚೂಣಿಯಲ್ಲಿ ಸೇವೆ ಮಾಡುತ್ತಿದ್ದು, ಸರಕಾರದ ಎಲ್ಲಾ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮತ್ತು ಮಾಹಿತಿಗಳನ್ನು ನೀಡುತ್ತಾ ಬಂದಿದೆ. ಇದರಿಂದಾಗಿ ಸಂಘಟನೆಯ ಮೇಲಿನ ಜನರ ನಿರೀಕ್ಷೆಗಳು ಮತ್ತಷ್ಟು ಬಲಗೊಂಡಿದೆ. ಈ ಸಂದರ್ಭದಲ್ಲಿ ಎಸ್‌ಡಿಪಿಐ ಕಡಬ ತಾಲೂಕು ಕಾರ್ಯದರ್ಶಿ ರಫೀಕ್ ನೆಲ್ಯಾಡಿ ಸಂದರ್ಭೋಚಿತವಾಗಿ ಮಾತನಾಡಿದರು, ಪಿಎಫ್ಐ ಮೆಡಿಕಲ್ ಉಸ್ತುವಾರಿ ಆಸಿಫ್ ಕೊಕ್ಕಡ ಮುಂತಾದವರು ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ನವಾಝ್ ಶೇಖ್ ಸ್ವಾಗತಿಸಿ, ಮರ್ಝೂಕ್ ಕೋಲ್ಪೆ ನಿರೂಪಿಸಿ ಧನ್ಯವಾದಗೈದರು.

Also Read  ಬೈಕ್ ಗಳೆರಡರ ನಡುವೆ ಡಿಕ್ಕಿ

 

error: Content is protected !!
Scroll to Top