ತೆಕ್ಕಾರು: ಮನೆಯ ಹಿಂಬದಿಯ ಗೋಡೆ ಕುಸಿತ ➤ ಅಪಾಯದಂಚಿನಲ್ಲಿ ಮನೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ.09, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತೆಕ್ಕಾರಿನಲ್ಲಿ ಮನೆಯೊಂದರ ಸಮೀಪದ ಗುಡ್ಡವೊಂದು ಕುಸಿದಿದೆ.

ಭಾನುವಾರದಂದು ತೆಕ್ಕಾರು ನಿವಾಸಿ ಸಿದ್ದೀಕ್ ಎಂಬವರ ಮನೆಯ ಅಂಗಳದಿಂದ ಗುಡ್ಡ ಜರಿದು, ಕೆಳಗಡೆಯಿದ್ದ ಅಕ್ಬರ್ ಎಂಬವರ ಮನೆಯ ಗೋಡೆಗೆ ಬಿದ್ದಿದೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ತೆಕ್ಕಾರು ಎಸ್ಸೆಸ್ಸೆಫ್ ಮತ್ತು ಎಸ್ ವೈಎಸ್ ಶಾಖಾ ಸದಸ್ಯರು ತುರ್ತು ಕಾರ್ಯಚರಣೆ ನಡೆಸಿ ಅಗತ್ಯ ವಸ್ತುಗಳ ಸ್ಥಳಾಂತರಿಸಿದರು. ಇನ್ನು ಗುಡ್ಡ ಕುಸಿಯುತ್ತಲೇ ಇದ್ದು, ಸಿದ್ದೀಕ್ ರವರ ಮನೆ ಅಪಾಯದಂಚಿನಲ್ಲಿದೆ. ಘಟನಾ ಸ್ಥಳಕ್ಕೆ ಬಾರ್ಯ ವಿ.ಎ ಭೇಟಿ ನೀಡಿ, ಮುನ್ನಚ್ಚರಿಕಾ ಕ್ರಮವಾಗಿ ಎರಡೂ ಮನೆಯವರನ್ನು ಸಂಬಂಧಿಕರ ಮನೆಗೆ ತೆರಳುವಂತೆ ಸೂಚಿಸಿದ್ದಾರೆ.

Also Read  ಉಡುಪಿ ಜಿಲ್ಲೆಯಲ್ಲಿ ಅತ್ಯಧಿಕ ಮಳೆ ದಾಖಲು! ➤ ಕರಾವಳಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್

error: Content is protected !!
Scroll to Top