ದ್ವಿತೀಯ ಪಿಯುಸಿಯಲ್ಲಿ ಸಾಧನೆಗೈದ ಕಡಬ ಸೈಂಟ್ ಜೋಕಿಮ್ಸ್ ವಿದ್ಯಾರ್ಥಿಗಳು ➤ ಕಾಲೇಜು ಆಡಳಿತ ಮಂಡಳಿಯಿಂದ ಅಭಿನಂದನೆ

(ನ್ಯೂಸ್ ಕಡಬ) newskadaba.com ಕಡಬ, ಆ.09. ದ್ವಿತೀಯ ಪಿಯುಸಿ ಯಲ್ಲಿ ಸಾಧನೆಗೈದ ಸೈಂಟ್ ಜೋಕಿಮ್ಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಚಾಲಕರು ಸ್ಮರಣಿಕೆ‌ ನೀಡಿ ಗೌರವಿಸಿದರು.

ವಾಣಿಜ್ಯ ವಿಭಾಗದಲ್ಲಿ 564 ಅಂಕ ಗಳಿಸಿದ ಶಬೀಹಾ, ಕಲಾ ವಿಭಾಗದಲ್ಲಿ 544 ಅಂಕ ಗಳಿಸಿದ ದಿಲೀಪ್ ಕುಮಾರ್, ವಿಜ್ಞಾನ ವಿಭಾಗದಲ್ಲಿ 520 ಅಂಕ ಗಳಿಸಿದ ಲೇಖನ್ ಕೆ.ಎನ್, ಲೆಕ್ಕ ಶಾಸ್ತ್ರದಲ್ಲಿ 100 ಅಂಕ ‌ಗಳಿಸಿರುವ ಅವ್ವಮತ್ ಜಂಶೀದಾ, ಆಯಿಷಾ ತನಾಝ್, ಅರ್ಥಶಾಸ್ತ್ರದಲ್ಲಿ 100 ಅಂಕ ಗಳಿಸಿರುವ ತಸ್ಮೀನಾ ಅವರನ್ನು ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆಯ ಸಂಚಾಲಕರಾದ ವಂ| ರೆ| ಫಾ| ರೊನಾಲ್ಡ್ ಲೋಬೋ ಅವರು ಸಂಸ್ಥೆಯ ಪರವಾಗಿ ಸ್ಮರಣಿಕೆಗಳನ್ನು ನೀಡಿ ಅಭಿನಂದಿಸಿದರು.

Also Read  ತಿಂಗಳು ಕಳೆದರೂ ನೇಮಕವಾಗಿಲ್ಲ ಬೆಳ್ಳಾರೆ ಠಾಣೆಗೆ ನೂತನ ಎಸ್ಐ

error: Content is protected !!
Scroll to Top