ಕಡಬ: ಎಸ್ಡಿಪಿಐ ವತಿಯಿಂದ ಆಯುಷ್ಮಾನ್ ಅಭಿಯಾನ

(ನ್ಯೂಸ್ ಕಡಬ) newskadaba.com ಕಡಬ, ಆ.9, ಎಸ್ಡಿಪಿಐ ವತಿಯಿಂದ ಇಲ್ಲಿನ ಹಳೇಸ್ಟೇಷನ್ ಎಂಬಲ್ಲಿ ಆಯುಷ್ಮಾನ್ ಕಾರ್ಡ್ ಅಭಿಯಾನವು ಶನಿವಾರದಂದು ನಡೆಯಿತು.

ಕಾರ್ಯಕ್ರಮವನ್ನು ಕಡಬ ತಾಲೂಕು ಅಧ್ಯಕ್ಷ ರಮ್ಲ ಸನ್ ರೈಸ್ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ಜನರಿಗೂ ತಲುಪಿಸುವ ಇಂತಹ ಮಾದರಿ ಕೆಲಸವನ್ನು ನಮ್ಮ ಪಕ್ಷವು ಆರಂಭದಿಂದಲೂ ರಾಜ್ಯಾದ್ಯಂತ ಮಾಡುತ್ತಿದೆ‌. ನಮ್ಮ ಕಾರ್ಯಕರ್ತರು ಮುಂದೆಯೂ ಇಂತಹ ಜನಪರ ಸೇವೆಯನ್ನು ಮುಂದುವರಿಸಲಿದ್ದಾರೆ ಎಂದರು. ಅತಿಥಿಯಾಗಿ ಭಾಗವಹಿಸಿದ ಎಸ್ಡಿಪಿಐ ವಲಯ ಸಮಿತಿ ಸದಸ್ಯ ಹಂಝ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೇವಲ ಭಾಷಣಗಳು ಮಾತ್ರ ಅಭಿವೃದ್ದಿಯಲ್ಲಿದೆ, ಆದರೆ SDPI ಪಕ್ಷವು ಜನಪರ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದರು. ಆಯುಷ್ಮಾನ್ ಕಾರ್ಡ್ ಅಭಿಯಾನ ಕಾರ್ಯಕ್ರಮದಲ್ಲಿ ಕಡಬದ ಸುತ್ತಮುತ್ತಲಿನ ಮೂನ್ನೂರಕ್ಕೂ ಹೆಚ್ಚು ಫಲಾನುಭವಿಗಳಿಗೆ ಕಾರ್ಡನ್ನು ವಿತರಿಸಲಾಯಿತು.

Also Read  ಟೊಮೇಟೊ ಬೆಲೆ ಕುಸಿತ ಆಕ್ರೋಶ ವ್ಯಕ್ತಪಡಿಸಿದ ರೈತರು

ಕಾರ್ಯಕ್ರಮದಲ್ಲಿ SDPI ನಾಯಕರಾದ ಕಮರುದ್ದೀನ್, ಸಮದ್ ಕೆಮ್ಮಾರ, ನೌಷಾದ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಡಬ ವಲಯ ಅಧ್ಯಕ್ಷ ಅಬ್ದುಲ್ ನಬಿ ಶಾನ್ ಮತ್ತು ಕಾರ್ಯದರ್ಶಿ ಅಬ್ದುಲ್ ಸಮದ್ ಕೋಡಿಬಾಂಳ ಉಪಸ್ಥಿತರಿದ್ದರು.

error: Content is protected !!
Scroll to Top