ಉಪ್ಪಿನಂಗಡಿ: ಹೊಂಡಕ್ಕೆ ಬಿದ್ದ ಕಾರು ➤ ಚಾಲಕ ಅಪಾಯದಿಂದ ಪಾರು



(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ‌.8, ಹೆದ್ದಾರಿಯ ಅಗಲೀಕರಣದ ನೆಪದಲ್ಲಿ ರಸ್ತೆಯ ಬದಿಯಲ್ಲಿ ನಿರ್ಮಿಸಲಾದ ಆಳವಾದ ಹೊಂಡಕ್ಕೆ ಕಾರೊಂದು ಬಿದ್ದು, ಸ್ಥಳೀಯರ ಯತ್ನದಿಂದಾಗಿ ಕಾರು ಚಾಲಕನೋರ್ವ ಅಪಾಯದಿಂದ ಘಟನೆ ಘಟನೆ ನಡೆದಿದೆ.





ಪೆರ್ನೆಯಿಂದ ಮಡಂತ್ಯಾರಿಗೆ ಕಾರಿನಲ್ಲಿ ಚಲಿಸುತ್ತಿದ್ದ ಅಫ್ಝಲ್ ಎಂಬವರು ರಸ್ತೆಗೆ ಅಡ್ಡಲಾಗಿ ಬಂದ ನಾಯಿಯನ್ನು ತಪ್ಪಿಸಲು ಯತ್ನಿಸಿದಾಗ ಬದಿಯಲ್ಲಿದ್ದ ನೀರು ತುಂಬಿದ ಹೊಂಡಕ್ಕೆ ಬಿದ್ದ ಪರಿಣಾಮ ನೀರಿನಲ್ಲಿ ಮುಳುಗಿದ್ದ ಅವರನ್ನು ಅದೇ ದಾರಿಯಲ್ಲಿ ಬರುತ್ತಿದ್ದ ಕರ್ವೇಲು ನಿವಾಸ್ ಶರೀಫ್ ಹಾಗೂ ಸಹಚರರು ಹೊಂಡಕ್ಕೆ ಧುಮುಕಿ ಕಾರಿನ ಹಿಂಬಾಗಿಲನ್ನು ತೆರೆದು ಹೊರಕ್ಕೆ ಎಳೆಯಲಾಯಿತು. ನೀರು ಕುಡಿದು ಅಸ್ವಸ್ಥರಾಗಿದ್ದ ಇವರನ್ನು ಪ್ರಾಥಮಿಕ ಚಿಕಿತ್ಸೆ ನೀಡಿ ರಕ್ಷಣೆ ಮಾಡಲಾಯಿತು.






error: Content is protected !!
Scroll to Top