ಪೆರ್ನೆ ಸಮೀಪ ಕಿರು ಸೇತುವೆಯಲ್ಲಿ ಕೆಟ್ಟು ನಿಂತ ಲಾರಿ ➤ ಕಿಲೋಮೀಟರ್ ಉದ್ದ ಟ್ರಾಫಿಕ್ ಜಾಮ್

ಸಾಂದರ್ಭಿಕ ಚಿತ್ರ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ.06. ಮಧ್ಯರಸ್ತೆಯಲ್ಲೇ ಲಾರಿಯೊಂದು ಕೆಟ್ಟು ನಿಂತ ಪರಿಣಾಮ ಕಿಲೋಮೀಟರ್ ಉದ್ದದಲ್ಲಿ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆ ಉಂಟಾಗಿದೆ.

ಉಪ್ಪಿನಂಗಡಿ – ಮಾಣಿ ನಡುವಿನ ಪೆರ್ನೆ ಸಮೀಪದ
ದೋರ್ಮೆ ಸೇತುವೆಯಲ್ಲಿ ಲಾರಿಯೊಂದು ಕೆಟ್ಟು ನಿಂತಿದೆ. ಪರಿಣಾಮ ರಸ್ತೆಯ ಇಕ್ಕೆಲಗಳಲ್ಲೂ ಕಿಲೋಮೀಟರ್ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿವೆ. ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

Also Read  ಬೆಳ್ತಂಗಡಿ: ಒಂಟಿ ವೃದ್ಧೆಯನ್ನು ಕೊಲೆಮಾಡಿ ನಗ-ನಗದು ದರೋಡೆ ಪ್ರಕರಣ ➤ ಬಂಧಿತ ಆರೋಪಿ ಮೃತ್ಯು

error: Content is protected !!
Scroll to Top