ಉಪ್ಪಿನಂಗಡಿ: ಜುಲೈ 31ಸಂಭ್ರಮದ ಬಕ್ರೀದ್ ಹಬ್ಬವನ್ನು ತೆಕ್ಕಾರುವಿನಲ್ಲಿ ಕೋವಿಡ್-19 ರ ಮುನ್ನೆಚ್ಚರಿಕೆಯೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.
ಬದ್ರಿಯಾ ಜುಮಾ ಮಸ್ಜಿದ್ ತೆಕ್ಕಾರುವಿನಲ್ಲಿ ಬೆಳಿಗ್ಗೆ 8:00 ಕ್ಕೆ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು.
ಮಾಸ್ಕ್ ಮತ್ತು ಮುಸಲ್ಲಗಳನ್ನು ಜನರೇ ಮನೆಯಿಂದಲೇ ತಂದು ಸಾಮಾಜಿಕ ಅಂತರ ಕಾಯ್ದುಕೊಂಡು ನಮಾಜ್ ನಲ್ಲಿ ನಿರತರಾದರು.
ಸರಕಾರದ ಆದೇಶದಂತೆ ವಿಶೇಷ ಪ್ರಾರ್ಥನೆ ನಡೆಯಿತು.
ಕೊರೊನಾ ಮುಕ್ತಿ ಹೊಂದಲು ಪ್ರತ್ಯೇಕ ಪ್ರಾರ್ಥನೆ ನಡೆಸಲಾಯಿತು. 14 ವರ್ಷದ ಮೇಲೆಯೂ 60 ವರ್ಷದ ಕೆಳಗಿನವರಿಗೆ ಮಾತ್ರ ಮಸೀದಿ ಪ್ರವೇಶಕ್ಕೆ ಅವಕಾಶವಿತ್ತು.
ಪರಸ್ಪರ ಆಲಿಂಗಾನ, ಶೇಕ್ ಹ್ಯಾಂಡ್ ಮಾಡದೆ ಜನರು ಕೋವಿಡ್-19 ಆದೇಶವನ್ನು ಪಾಲಿಸಿ ಸಂಭ್ರಮದಿಂದ ಬಕ್ರೀದ್ ಹಬ್ಬ ಆಚರಿಸಿದರು.