ನಾಳೆ ನಡೆಯುವ ಬಕ್ರೀದ್ ಹಿನ್ನೆಲೆ ➤ ಕಡಬ ಠಾಣೆಯಲ್ಲಿ ಶಾಂತಿ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಜು.30. ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆಯವರ ನೇತೃತ್ವದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಯಿತು.

ಸಭೆಯಲ್ಲಿ ಹಿರಿಯ ಮುಖಂಡರು ಉಪಸ್ಥಿತರಿದ್ದು, ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಂಡು, ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಕೊಂಡು ಬಕ್ರೀದ್ ಹಬ್ಬವನ್ನು ಆಚರಿಸುವ ಬಗ್ಗೆ ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಡಬ ಎಸ್.ಐ.ರುಕ್ಮ ನಾಯ್ಕ್, ಎಎಸ್ಐ ರವಿ, ಕಾನ್ಸ್‌ಟೇಬಲ್ ಭವಿತ್ ರೈ, ಧಾರ್ಮಿಕ ಮುಖಂಡರಾದ ಮರ್ಧಾಳ ಮಸೀದಿಯ ಹಮೀದ್ ತಂಗಳ್, ಹಾಜಿ ಹನೀಫ್ ಕೆ.ಎಮ್. ರಜಾಕ್ ಆತೂರು, ಅಜಾದ್ ಆಲಂಕಾರು, ಇಬ್ರಾಹಿಂ ಅಡ್ಕಾಡಿ, ಇಬ್ರಾಹಿಂ ಸಾಹೇಬ್, ಇಸ್ಮಾಯಿಲ್ ಗಂಡಿಬಾಗಿಲು, ಮಹಮ್ಮದ್ ನೆಟ್ಟಣ ಮೊದಲಾದವರು
ಭಾಗವಹಿಸಿದ್ದರು.

Also Read  ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

error: Content is protected !!
Scroll to Top