ಕಡಬದಲ್ಲಿ ಕೋವಿಡ್ ಸ್ಫೋಟ ➤ ಒಂದೇ ದಿನ 11 ಮಂದಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಕಡಬ, ಜು.29. ಕಡಬ ತಾಲೂಕಿನಲ್ಲಿ ಇಂದು ಅತ್ಯಧಿಕ ಕೋವಿಡ್ ಪ್ರಕರಣಗಳು ಪತ್ತೆಯಾಗುವುದರ ಮೂಲಕ ಕೊರೋನಾ ಸ್ಫೋಟಗೊಂಡಿದೆ.


ಕಡಬ ತಾಲೂಕಿನ ಬಲ್ಯ ನಿವಾಸಿ 36 ವರ್ಷದ ಮಹಿಳೆ, ಕಡ್ಯ ಕೊಣಾಜೆಯ 37 ವರ್ಷದ ವ್ಯಕ್ತಿ, ಆಲಂಕಾರು ನಿವಾಸಿ 41 ವರ್ಷದ ವ್ಯಕ್ತಿ, ಚಾರ್ವಾಕ ನಿವಾಸಿ 41 ವರ್ಷದ ವ್ಯಕ್ತಿ, ಕಡಬದ 39 ವರ್ಷದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇನ್ನು ಕಡಬ ತಾಲೂಕಿನ ಬೆಳಂದೂರು ರೈಲ್ವೇಗೇಟ್ ಬಳಿಯ ಮೂವರು ಮಹಿಳೆಯರು, ಇಬ್ಬರು ಯುವಕರು ಹಾಗೂ 6 ವರ್ಷದ ಬಾಲಕ ಸಹಿತ ಒಂದೇ ಮನೆಯ ಆರು ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಕಡಬ ತಾಲೂಕಿನಲ್ಲಿ ಒಂದೇ ದಿನ 11 ಮಂದಿಗೆ ಸೋಂಕು ತಗಲಿದೆ. ಇನ್ನು ಪುತ್ತೂರು ತಾಲೂಕಿನಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ಮಣಿಕ್ಕರ ನಿವಾಸಿ 78 ವರ್ಷ ವಯಸ್ಸಿನ ವೃದ್ಧ ಹಾಗೂ ಉಪ್ಪಿನಂಗಡಿಯಲ್ಲಿ ಸೆಕ್ಯೂರಿಟಿ ಆಗಿದ್ದ ಉತ್ತರ ಪ್ರದೇಶದ 70 ವರ್ಷ ವಯಸ್ಸಿನ ವ್ಯಕ್ತಿಯಲ್ಲಿ ಕೊರೋನಾ ಪ್ರಕರಣ ದೃಢಪಟ್ಟಿದೆ.

Also Read  ಅಳಿಕೆ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ನ ಅಧ್ಯಕ್ಷ ಗಂಗಾಧರ್ ಭಟ್ ನಿಧನ

error: Content is protected !!
Scroll to Top