(ನ್ಯೂಸ್ ಕಡಬ) newskadaba.com ಸಿರಾಜುಲ್ ಹುದಾ ಎಜುಕೇಷನಲ್ ಸೆಂಟರ್ ಪಾಡಿ ಕನ್ಯಾನ ಈ ಹೆಸರು ಕೇಳದ ಜನ ಬಹು ವಿರಳ, ಮೊದಲು ಯಾರಿಗೂ ತಿಳಿದಿರದ ಕುಗ್ರಾಮವಾಗಿತ್ತು. ಕೇವಲ ಮದ್ರಸ ವಿಧ್ಯಾರ್ಥಿಗಳಿಂದ ಸ್ಥಾಪನೆಗೊಂಡ ಸಂಸ್ಥೆಯು ಕ್ರಮೇಣ ಶೈಖುನಾ ಅಸಯ್ಯಿದ್ ಪೊಸೋಟ್ ತಂಙಳ್ (ಖ.ಸಿ) ನಿರ್ದೇಶನದಂತೆ ತಂಙಳ್ ರವರ ಆಶೀರ್ವಾದದೊಂದಿಗೆ ತನ್ನ ಸಮಯವನ್ನೆಲ್ಲಾ ಸಿರಾಜುಲ್ ಹುದಾಕ್ಕೋಸ್ಕರ ಮೀಸಲಿಟ್ಟು ಪ್ರತ್ಯುಪಕಾರವಾಗಿ ಯಾವುದೇ ಸಂಬಳವನ್ನು ಆಶಿಸದೆ ಬಹು ಹಮೀದ್ ಸಖಾಫಿ ಉಸ್ತಾದರ ಸತತವಾಗಿ ಕಠಿಣ ಪರಿಶ್ರಮದ ಫಲದಿಂದಾಗಿ ಹಾಗೂ ದಾನಿಗಳಾದ ತಮ್ಮೆಲ್ಲರ ಸಹಕಾರದಿಂದ ಸಿರಾಜುಲ್ ಹುದಾ ಎಂಬ ಸಂಸ್ಥೆ ಉನ್ನತಿಯಿಂದ ಉನ್ನತಿಗೇರುತ್ತಾ ‘ಪಾಡಿ’ ಎಂಬ ಕುಗ್ರಾಮವು ನಾಡಿನ ವಿವಿಧ ದಿಕ್ಕಿನಲ್ಲಿ ಅರಿಯಲ್ಪಡುತ್ತಿದೆ.
ಸಿರಾಜುಲ್ ಹುದಾ ಎಜ್ಯುಕೇಷನಲ್ ಟ್ರಸ್ಟ್ ಪಾಡಿ ಕರೋಪಾಡಿ ಕನ್ಯಾನ ಸಂಸ್ಥೆಯು ಜಿಸಿಸಿಯ ಲಕ್ಷ್ಯವಾಗಿಟ್ಟು ನೂತನ ಗಲ್ಫ್ ಕಮಿಟಿಯನ್ನು ಬಹು ಅಬ್ದುಲ್ ಹಮೀದ್ ಸಖಾಫಿ ಉಸ್ತಾದರ ನೇತೃತ್ವದಲ್ಲಿ ಜುಲೈ 22 ರಂದು ಅಸ್ತಿತ್ವಕ್ಕೆ ತರಲಾಯಿತು.
ಇದರ ನೇತೃತ್ವವನ್ನು ಬಹು ಅಬ್ದುಲ್ ಹಮೀದ್ ಸಖಾಫಿ ಪಾಡಿ ನೀಡಿ, ಬಹು ಅಬ್ದುಲ್ ರಹ್ಮಾನ್ ಲತ್ವೀಫಿ ಮುಂಬೈ ಸಭೆಯ ಸ್ವಾಗತ ಗೈದರು. ಬಹು ಅಬ್ದುಲ್ಲ ಉಸ್ತಾದ್ ಪೈವಳಿಕೆ ಉದ್ಘಾಟನೆ ನೆರವೇರಿಸಿದರು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಕಮಿಟಿಗೆ ಹಿರಿಯ ಸದಸ್ಯರು ಹಾಗೂ ಎಲ್ಲಾ ವಿಷಯದಲ್ಲೂ ಸಹಕಾರಿಗಳಾದ ಮೊಯ್ದೀನ್ ಹಾಜಿ ಪರಕಾಜೆ (ಜಿದ್ದಾ), ಅಬ್ದುಲ್ಲಾ ಉಸ್ತಾದ್ ಪೈವಳಿಕೆ, ಬಶೀರ್ ಮದನಿ ಬೆಜ್ಜಾ (ಜಿದ್ದಾ) ಇವರನ್ನು ಗೌರವಾಧ್ಯಕ್ಷರಾಗಿ ನೇಮಿಸಲಾಯಿತು.
ಉಮ್ಮರ್ ಝಹ್ರೀ ಕಲ್ಮಿಂಜ (ಕುವೈತ್) ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಅಬ್ದುಲ್ಲಾ ಪೈವಳಿಕೆ (ಬಹ್ರೇನ್), ಬಶೀರ್ ಚೆಡವ್ (ಕೆಎಸ್ಎ), ಜಲಾಲ್ ಮರಾಠಿಮೂಲೆ (ಯುಎಇ) ಇವರನ್ನು ನೇಮಿಸಲಾಯಿತು. ಕಾರ್ಯದರ್ಶಿಗಳಾಗಿ ರಿಜ್ವಾನ್ ಕೆ.ಸಿ.ರೋಡ್ (ಓಮನ್) ಆಯ್ಕೆ ಮಾಡಲಾಗಿದೆ. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ಕರೀಮ್ ಬೇತ (ಯುಎಇ), ಮುಹಮ್ಮದ್ ಶರೀಫ್ ನೂಜಿ (ಬೆಂಗಳೂರು), ಮುಹಮ್ಮದ್ ಉನೈಸ್ ಬೋಳಂತೂರ್, ಕೋಶಾಧಿಕಾರಿಯಾಗಿ ಅಬ್ಬಾಸ್ ಪಾಡಿ (ಜಿದ್ದಾ) ಅವರನ್ನು ಆಯ್ಕೆ ಮಾಡಲಾಗಿದೆ.
ಸಿರಾಜುಲ್ ಹುದಾ ಇದರ ವಿಷಯ ಹಾಗೂ ಪ್ರತೀ ತಿಂಗಳ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ‘ದಅವಾ ವಿಂಗ್’ ಎಂಬ ಹೊಸ ಪ್ಯಾನೆಲ್ ಆಯ್ಕೆ ಮಾಡಿ ಅದರ ಜವಾಬ್ದಾರಿಯನ್ನು
ಮಲಿಕ್ ಅಮಾನಿ ಮರಾಟಿಮೂಲೆ (ಯುಎಇ), ಅಬ್ದುಲ್ ರಹಮಾನ್ ಲತೀಫಿ (ಮುಂಬೈ), ಕಬೀರ್ ಸಆದಿ ವೆನೂರ್, ರಹೀಮ್ ಹಾಜಿ ಉಪ್ಪಳ (ಓಮನ್) ಈ ನಾಲ್ಕು ಜನರನ್ನೊಳಗೊಂಡ ತಂಡವನ್ನು ನೇಮಕಾತಿ ಮಾಡಲಾಯಿತು.
ಸಿರಾಜುಲ್ ಹುದಾ ಸ್ಥಾಪನೆಗೆ ಯಾವುದೇ ತುರ್ತು ಸೇವೆ ಆವಶ್ಯಕತೆ ಇದ್ದಲ್ಲಿ ಅದಕ್ಕಾಗಿ ವಿಂಗ್ ನ್ನು ಸ್ಥಾಪಿಸಲಾಗಿದೆ. ಅದರಲ್ಲಿಅಬ್ದುಲ್ ಕರೀಮ್ ಪಾಡಿ (ಜಿದ್ದಾ), ಸಿದ್ದೀಕ್ ಸಮಡ್ಕ (ಕತಾರ್), ಇಕ್ಬಾಲ್ ಕಮ್ಮಾಜೆ (ಯುಎಇ), ಅಬ್ದುಲ್ ಸಮದ್ ಹೊಸಂಗಡಿ (ಜಿದ್ದಾ) ಸಾಮಾಜಿಕ ಪ್ರಚಾರ ವಿಭಾಗದಲ್ಲಿ
ಸಂಸ್ಥೆಯ ಉನ್ನತಿಗಾಗಿ ಪ್ರಚಾರವು ಬಹಳ ಪ್ರಮುಖ ಪಾತ್ರ. ಈಗಿನ ಕಾಲದಲ್ಲಿ ಟ್ವಿಟರ್, ಫೇಸ್ ಬುಕ್, ಇನ್’ಸ್ಟ್ರಾಗ್ರಾಂ, ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಸಂಸ್ಥೆಯ ಪ್ರಚಾರಕ್ಕಾಗಿ ರಫೀಕ್ ಮಂಡಿಯೂರ್ (ಯುಎಇ), ಸ್ವಾಲಿಹ್ ಬಂಡಿತಡ್ಕ (ಯುಎಇ) ಕಲಂದರ್ ಧರ್ತಿಲ್ (ಬೆಂಗಳೂರು), ಜಲೀಲ್ ಮಿತ್ತನಡ್ಕ (ಯುಎಇ) ಆರಿಸಲಾಗಿದೆ. ಸಂಸ್ಥೆಯ ವತಿಯಿಂದ ತೀವ್ರ ಸಂಕಷ್ಟದಲ್ಲಿರುವವರನ್ನು ಕಣ್ಣೀರೊಪ್ಪುವ ನಿಟ್ಟಿನಲ್ಲಿ ಅಂತಹ ಯಾವುದೇ ಪ್ರಕರಣಗಳು ಇದ್ದಲ್ಲಿ ಸಂಸ್ಥೆಯ ವತಿಯಿಂದ ಸ್ಪಂದಿಸಲು ಪ್ರತ್ಯೇಕ ವಿಭಾಗ ರಚಿಸಲಾಗಿದೆ. ಯೂಸುಫ್ ಬಾಯಾರ್ (ಜಿದ್ದಾ), ಖಲೀಲ್ ಮರಾಠಿಮೂಲೆ(ಯುಎಇ),ಕಲಂದರ್ ಶಾಫಿ ಮುನ್ನಿಪ್ಪಾಡಿ (ಯುಎಇ), ಮುಸ್ತಫಾ ಉಪ್ಪಳ (ಓಮನ್) ಸಂಸ್ಥೆಗೆ ಬೇಕಾದ ಸಲಹೆ ಸಹಕರಣೆಗಳನ್ನು ನೀಡಿ ಉನ್ನತಿಯಿಂದ ಉನ್ನತಿಗೇರಿಸುವ ನಿಟ್ಟಿನಲ್ಲಿ ಸಂಚಾಲಕರಾಗಿ ಅಬ್ದುಲ್ ರಜಾಕ್ ಕಣಿಯೂರು, ಸಿದ್ದೀಕ್ ಕೋಡ್ಲ (ತ್ವಾಯಿಫ್), ಅಬ್ದುಲ್ ರಹಮಾನ್ ನೆಕ್ಲಾಜೆ (ಮುಂಬೈ), ರಫೀಕ್ ಕಂಡಿಮಾರ್ (ಯುಎಇ), ಶರೀಫ್ ಬಿ.ಸಿ ರೊಡ್ (ಬೆಂಗಳೂರು) ಅವರನ್ನು ಆಯ್ಕೆ ಮಾಡಲಾಗಿದೆ.