ಪ್ರಗತಿಪರ ಕೃಷಿಕ, ಶತಾಯುಷಿ ಕಾಳಪ್ಪ ಗೌಡ ಬಳ್ಳೇರಿ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಜು.26. ತಾಲೂಕಿನ ಪ್ರಗತಿಪರ ಕೃಷಿಕ, ಶತಾಯುಷಿ ಬಳ್ಳೇರಿ ಕಾಳಪ್ಪ ಗೌಡ ಅಲ್ಪ ಕಾಲದ ಅಸೌಖ್ಯದಿಂದಾಗಿ ಭಾನುವಾರದಂದು ಸ್ವಗೃಹದಲ್ಲಿ ನಿಧನರಾದರು.

ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಬಳ್ಳೇರಿ ನಿವಾಸಿಯಾಗಿರುವ ಇವರಿಗೆ 102 ವರ್ಷ ವಯಸ್ಸಾಗಿತ್ತು. ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದ ಇವರು ವಯೋಸಹಜ ಕೆಲದಿನಗಳ ಅಸೌಖ್ಯದಿಂದಾಗಿ ಮನೆಯಲ್ಲೇ ಮೃತಪಟ್ಟಿದ್ದಾರೆ‌. ಇವರು ಕಾಂಗ್ರೆಸ್ ಮುಖಂಡ ಬಾಲಕೃಷ್ಣ ಗೌಡ ಬಳ್ಳೇರಿ ಸೇರಿದಂತೆ ಆರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Also Read  ಕುಕ್ಕೇ ಸುಬ್ರಹ್ಮಣ್ಯ ದೇವಾಲಯದ ಮಾಸ್ಟರ್ ಪ್ಲಾನ್ ಸಮಿತಿಗೆ ಸದಸ್ಯರ ನೇಮಕ

error: Content is protected !!
Scroll to Top