ಕೊರೋನಾ ಭೀತಿ ನಡುವೆ ಬಕ್ರೀದ್ ಹಬ್ಬ ➤ ಸರಕಾರದಿಂದ ಮಾರ್ಗಸೂಚಿ ಪ್ರಕಟ

(ನ್ಯೂಸ್ ಕಡಬ) newskadaba.com ಬೆಂಗಳೂರು: ಜು.25, ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದರೆ ಈ ನಡುವೆ ಆಗಸ್ಟ್ 1ರಂದು ಬಕ್ರೀದ್ ಹಬ್ಬ ಆಚರಣೆ ಮಾಡುವುದಾಗಿ ಹಿಲಾಲ್ ಸಮಿತಿ ತಿಳಿಸಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಜುಲೈ 31ರಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಕೆಲ ಮಾರ್ಗಸೂಚಿಗಳನ್ನು ಪ್ರಕಟ ಮಾಡಿದೆ.

ಗೈಡ್ ಲೈನ್ಸ್ ಹೊರಡಿಸಿದ ಸರ್ಕಾರ: ಪ್ರಾರ್ಥನೆ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ, 60 ವರ್ಷಕ್ಕಿಂತ ಮೇಲ್ಪವರು ಹಾಗೂ 10 ವರ್ಷಕ್ಕಿಂತ ಕೆಳಗಿನವರು ಮನೆಯಲ್ಲಯೇ ಪ್ರಾರ್ಥನೆ ಮಾಡಬೇಕು. ನಮಾಜ್ ಮಾಡುವಾಗ ಸಾಮಾಜಿಕ ಅಂತರ ಕಡ್ಡಾಯ. ಮಸೀದಿ ಪ್ರವೇಶಿಸುವ ಮುನ್ನ ದೇಹದ ತಾಪಾಮಾನ ತಪಾಸಣೆ ಮಾಡಬೇಕು. ಕೈಗಳನ್ನು ಸೋಪು ಅಥವಾ ಸ್ಯಾನಿಟೈಸರ್ ನಿಂದ ಸ್ವಚ್ಛ ಮಾಡಿಕೊಳ್ಳಬೇಕು. ಮಸೀದಿಗಳಲ್ಲಿ ಧಾರ್ಮಿಕ ಗ್ರಂಥಗಳನ್ನು ಮುಟ್ಟುವಂತಿಲ್ಲ. ತಮ್ಮ ಮನೆಗಳಿಂದ ಮುಸಲ್ಲಾವನ್ನು ತರುವುದು ಕಡ್ಡಾಯ. ಹಸ್ತಲಾಘನ, ಆಲಿಂಗನ ಮಾಡುವಂತಿಲ್ಲ. ಅಪರಿಚಿತರು ಪ್ರಾರ್ಥನೆ ಮಾಡಲು ಬಂದರೆ ಅವರ ಮೇಲೆ ವಿಶೇಷ ಗಮನವಿರಲಿ.ಈದ್ಗಾಹ್ ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧ. ಪ್ರಾರ್ಥನೆ ವೇಳೆ ಮಸೀದಿಗಳಲ್ಲಿ ಗರಿಷ್ಠ 50 ಜನ ಮೀರಬಾರದು. 5 ಹೊತ್ತಿನ ನಮಾಜ್ ನಿರ್ಬಂಧ. ಸಭಾಂಗಣ, ಸಮುದಾಯ ಭವನ, ಶಾದಿ ಮಹಲ್ ನಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ.

Also Read  ಬೆಳ್ಳಾರೆ ದಾರುಲ್ ಹುದಾ ಸಂಸ್ಥೆಗೆ ನವ ಸಾರಥ್ಯ

error: Content is protected !!
Scroll to Top