ಮಡಿಕೇರಿ: ವಿವಿಧೆಡೆ ಕಂಪಿಸಿದ ಭೂಮಿ

(ನ್ಯೂಸ್ ಕಡಬ) newskadaba.com ಮಡಿಕೇರಿ, ಸೆ.12. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಪರಿಸರದಲ್ಲಿ ಇಂದು ಬೆಳಿಗ್ಗೆ 7:30 ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವ ಕೆಲವರಿಗೆ ಉಂಟಾಗಿದೆ.

1.5 ರಷ್ಟು ತೀವ್ರತೆಯ ಭೂಕಂಪನವಾದ ಹಿನ್ನೆಲೆಯಲ್ಲಿ ಗ್ರಾಮದ ಸುತ್ತಮುತ್ತಲಿನ ಜನರು ಮನೆಯೊಳಗೆ ಇದ್ದವರು ಭಯಭೀತರಾಗಿ ಹೊರಗೆ ಓಡಿದ್ದಾರೆ. ಮಂಚ, ಟಿ.ವಿ. ಸ್ಟ್ಯಾಂಡ್, ಟೇಬಲ್, ಪಾತ್ರೆಗಳು ಹೀಗೆ ಮನೆಯೊಳಗಿದ್ದ ವಸ್ತುಗಳು ಅಲ್ಲಾಡಿದನ್ನು ಕಂಡು ಮನೆ ಮಂದಿಯೆಲ್ಲರೂ ಗಾಬರಿಯಾಗಿ ಕಕ್ಕಾಬಿಕ್ಕಿಯಾಗಿ ಓಡಿದ್ದಾರೆ.

Also Read  ಬಂಟ್ವಾಳ: ನೂತನ ಡಿವೈಎಸ್ಪಿ ಆಗಿ ಪ್ರತಾಪ್ ಟಿ. ರಾಥೋಡ್ ಅಧಿಕಾರ ಸ್ವೀಕಾರ

ಈ ಹಿಂದೆ ಕೆಲವು ಬಾರಿ ಭೂಕಂಪನ ನಡೆದಿದ್ದರೂ ಇಷ್ಟು ಪ್ರಮಾಣದ ಹಾಗೂ ತೀವ್ರತೆಯ ಕಂಪನದ ಅನುಭವ ಆಗಿರಲಿಲ್ಲ ಎಂದು ಗ್ರಾಮಸ್ಥರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

error: Content is protected !!
Scroll to Top