(ನ್ಯೂಸ್ ಕಡಬ) newskadaba.com ಬೆಳ್ತಂಗಡಿ: ಜು.22, ಕಾಶಿಪಟ್ಟಣ ಗ್ರಾಮದ ಕೇಳದಪೇಟೆ ಹೊಸಮನೆ ನಿವಾಸಿ, ಬೆಳ್ತಂಗಡಿ ಪಿ.ಎಲ್.ಡಿ‌ ಬ್ಯಾಂಕ್ ಮಾಜಿ ನಿರ್ದೇಶಕ ಅನೂಪ್ ಕುಮಾರ್ ಜೈನ್ (67) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತರಾಗಿದ್ದ ಇವರು ಕಾಶಿಪಟ್ಟಣ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿ‌ ಹಾಗೂ ಕೇಳದಪೇಟೆ ಶ್ರೀ ಅನಂತನಾಥ ಸ್ವಾಮಿ ಬಸದಿಯ ಕಾರ್ಯಾಧ್ಯಕ್ಷರಾಗಿ‌ಯೂ ಪರಿಚಿತರಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಪಾರ ಬಂಧುವರ್ಗದವರನ್ನೂ ಅಗಲಿದ್ದಾರೆ.

Also Read  ವಿದ್ಯಾರ್ಥಿ ವೇತನಕ್ಕೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

error: Content is protected !!
Scroll to Top