(ನ್ಯೂಸ್ ಕಡಬ) newskadaba.com ಕಡಬ, ಜು.21. ಕಳೆದ ನಾಲ್ಕು ದಿನಗಳಿಂದ ಕಡಬದ ಜನತೆಯಿಂದ ದೂರವಾಗಿದ್ದ ಕೊರೋನಾ ಮಹಾಮಾರಿಯು ಇಂದು ಮತ್ತೆ ಪತ್ತೆಯಾಗಿದೆ.
ಕಳೆದೆರಡು ದಶಕಗಳಿಂದ ಕಡಬದ ಮುಖ್ಯ ಪೇಟೆಯಲ್ಲಿ ವ್ಯಾಪಾರ ಮಾಡುತ್ತಿದ್ದ 45 ವರ್ಷ ಪ್ರಾಯದ ವ್ಯಾಪಾರಿಯೋರ್ವರಿಗೆ ಕೊರೋನಾ ದೃಢಪಟ್ಟಿದ್ದು, ಕಡಬದ ಜನತೆಗೆ ಮತ್ತೆ ಆತಂಕ ಶುರುವಾಗಿದೆ. ಕಳೆದ ಕೆಲವು ದಿನಗಳಿಂದ ಶೀತ ಜ್ವರದಿಂದ ಬಳಲುತ್ತಿದ್ದ ಇವರು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ. ಇದೀಗ ಅವರ ಗಂಟಲು ದ್ರವದ ಪರೀಕ್ಷೆಯಲ್ಲಿ ಕೊರೋನಾ ಇರುವುದು ದೃಢಪಟ್ಟಿದೆ.