ಉಳ್ಳಾಲ: ಯುವಕ ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಉಳ್ಳಾಲ ಜು.18, ಠಾಣಾ ವ್ಯಾಪ್ತಿಯ ಪಾನೀರ್ ಎಂಬಲ್ಲಿ ಬಾಡಿಗೆ ಕೋಣೆಯೊಂದರಲ್ಲಿ ವಾಸ ಮಾಡುತ್ತಿದ್ದ ಯುವಕನೋರ್ವ ಕೌಟುಂಬಿಕ ಸಮಸ್ಯೆಯಿಂದ ನೊಂದುಕೊಂಡು ಆತ್ಮಹತ್ಯೆಗೈದ ಘಟನೆ ಶನಿವಾರ ಬೆಳಕಿಗೆ ಬಂದಿದೆ.

ಮೃತರನ್ನು ಬೆಳ್ಮ ಗ್ರಾಮದ ರೆಂಜಾಡಿ ನಿವಾಸಿ ಮಲಿಕ್ (21) ಎಂದು ಗುರುತಿಸಲಾಗಿದೆ. ಈತನು ಮುಡಿಪು ಮೂಲದ ಯುವತಿಯನ್ನು ಪ್ರೀತಿಸಿ ವಿವಾಹವಾದ ಬಳಿಕ, ತನ್ನ ಮನೆಯಿಂದ ಹೊರಬಂದು ಬಾಡಿಗೆ ಮನೆಯಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ವಾಸವಾಗಿದ್ದನು. ಮಲಿಕ್ ಗೆ ದುಡಿಯಲೆಂದು ಪತ್ನಿಯ ತಂದೆ ಅಟೋ ರಿಕ್ಷಾವೊಂದನ್ನು ಖರೀದಿಸಿ ಕೊಟ್ಟಿದ್ದರು. ವಿವಾಹದ ಬಳಿಕ ಇವರ ಕುಟುಂಬದಲ್ಲಿ ಹಲವು ಬಾರಿ ಕೌಟುಂಬಿಕ ಜಗಳಗಳು ನಡೆಯುತ್ತಿದ್ದು, ಕಳೆದ ಎರಡು ದಿನಗಳಿಂದ ಈತ ಮನೆಗೆ ಬಂದು ಹೆಂಡತಿ ಜೊತೆ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಶುಕ್ರವಾರ ಕೂಡಾ ಕ್ಷುಲ್ಲಕ ಕಾರಣಕ್ಕೆ ಪತ್ನಿ ಜತೆ ಜಗಳ ಮಾಡಿದ್ದ ಈತ ಅದೇ ಕಾರಣಕ್ಕೆ ನೊಂದು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಗ್ಯಾಸ್ ಸಿಲಿಂಡರ್ ಸ್ಫೋಟ ► ಇಬ್ಬರಿಗೆ ಗಾಯ, ನಾಲ್ಕು ಮನೆಗಳಿಗೆ ಹಾನಿ

error: Content is protected !!
Scroll to Top