ವಯೋವೃದ್ಧೆಯ ಮೇಲೆ ಹಿಂಸಾತ್ಮಕ ವರ್ತನೆ ➤ ವೀಡಿಯೋ ವೈರಲ್ ಆರೋಪಿಗಳ ಬಂಧನ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಜು.17, ಪೊಲೀಸ್‌ ಠಾಣಾ ವ್ಯಾಪ್ತಿಯ ಸವಣಾಲು ಎಂಬಲ್ಲಿ ಅನಾರೋಗ್ಯ ಪೀಡಿತ ವಯೋವೃದ್ದ ಮಹಿಳೆಯೋರ್ವರನ್ನು ಆಕೆಯ ಮಗ ಹಾಗೂ ಮೊಮ್ಮಗ ಕ್ರೂರವಾಗಿ ಹಿಂಸಿಸುತ್ತಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

70 ವರ್ಷದ ವೃದ್ದ ಮಹಿಳೆ ಬೆಳ್ತಂಗಡಿಯ ಸವಣಾಲು ಹಲಸಿನಕಟ್ಟೆ ನಿವಾಸಿಯಾಗಿದ್ದು, ಇವರನ್ನು ಹಿಂಸಿಸುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಬೆಳ್ತಂಗಡಿ ಠಾಣಾ ಪೊಲೀಸರು ಆರೋಪಿಗಳಾದ ವೃದ್ದೆಯ ಮಗ ಶ್ರೀನಿವಾಸ ಶೆಟ್ಟಿ ಮತ್ತು ಮೊಮ್ಮಗ ಪ್ರದೀಪ್‌ ಶೆಟ್ಟಿ ಎಂಬವರನ್ನು ಮನೆಯಲ್ಲಿ ಅಮಾನೀಯವಾಗಿ ವರ್ತಿಸಿಕೊಂಡ ಬಗ್ಗೆ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡ ಬೆಳ್ತಂಗಡಿ ಠಾಣಾ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿ 324, 504 IPC & 24 senior citizen act 2007ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ತೊಡಿಕಾನ ದೇವಳಕ್ಕೆ ದೇವರಗುಂಡಿಯಿಂದ ಪವಿತ್ರ ಜಲತೀರ್ಥ ಯಾತ್ರೆ

 

error: Content is protected !!
Scroll to Top