ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ➤ ಫೋಕ್ಸೋ ಕಾಯ್ದೆಯಡಿ ಮೀನು ವ್ಯಾಪಾರಿಯ ಬಂಧನ

(ನ್ಯೂಸ್ ಕಡಬ)newskadaba.com ಮೂಡಬಿದ್ರೆ: ಜು.17, ಮೀನು ವ್ಯಾಪಾರಿಯೋರ್ವ ರು ಸ್ಥಳೀಯದ ಅಪ್ರಾಪ್ತೆಯನ್ನು ಪುಸಲಾಯಿಸಿ ಅತ್ಯಾಚಾರವೆಸಗಿರುವ ಘಟನೆ ಮಾರ್ಪಾಡಿಯಲ್ಲಿ ನಡೆದಿದೆ.


ಈಕೆಯು ತನ್ನ ಪೋಷಕರ ಜೊತೆ ಇದೇ ಪರಿಸರದಲ್ಲಿ ವಾಸವಿದ್ದಳು ಎನ್ನಲಾಗಿದೆ. ಮೀನು ವ್ಯಾಪಾರಿಯಾಗಿದ್ದ ಈತನು ಅಪ್ರಾಪ್ತೆಯ ಜೊತೆಗೆ ಸಲುಗೆ ಬೆಳೆಸಿ, ಆಕೆಯನ್ನು ಪುಸಲಾಯಿಸಿ ಹತ್ತಿರದ ಗುಡ್ಡಕ್ಕೆ ಕರೆದೊಯ್ದು ಅತ್ಯಾಚಾವೆಸಗಿದ್ದಾನೆ. ಅಪ್ರಾಪ್ತೆಯು ಮನೆಯಲ್ಲಿ ಮಂಕಾಗಿ ಇರುತ್ತಿದ್ದುದನ್ನು ಕಂಡು ಮನೆಮಂದಿ ವಿಚಾರಿಸಿದಾಗ ಅತ್ಯಾಚಾರದ ವಿಚಾರವು ಮನೆಮಂದಿಯ ಗಮನಕ್ಕೆ ಬಂದಿದೆ. ಈ ಬಗ್ಗೆ ಸಂತ್ರಸ್ತೆಯ ತಂದೆ ಪೊಲೀಸರಿಗೆ ನೀಡಿದ ದೂರಿನನ್ವಯ ಆರೋಪಿಯನ್ನು ಬಂಧಿಸಿದ ಪೊಲೀಸರು ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Also Read  ಸುಳ್ಯ: ಕಣಿಪ್ಪಿಲ್ಲ ರಬ್ಬರ್ ಸ್ಮೋಕ್ ಹೌಸ್ ನಲ್ಲಿ ಬೆಂಕಿ ಅವಘಡ

error: Content is protected !!
Scroll to Top