ಭಾರೀ ಮಳೆಗೆ ನಲುಗಿದ ಕರಾವಳಿ ➤ ಮಿತ್ತಕೋಡಿಯಲ್ಲಿ ಬೃಹತ್ ಗುಡ್ಡ ಕುಸಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.16. ದ.ಕ.ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ನಗರದ ಹೊರವಲಯದ ಮುಡಿಪು ಸಮೀಪದ ಮಿತ್ತಕೋಡಿ ಬಳಿ ಗುಡ್ಡ ಕುಸಿದು ಬಿದ್ದ ಘಟನೆ ಗುರುವಾರ ಸಂಜೆ ಸಂಭವಿಸಿದೆ.

ಕರಾವಳಿಯಲ್ಲಿ ಗುರುವಾರ ಮುಂಜಾನೆಯಿಂದಲೇ ಧಾರಾಕಾರ ಮಳೆ ಸುರಿಯುತ್ತಿದ್ದು, ಸಂಜೆಯ ವೇಳೆಗೆ ಮಿತ್ತಕೋಡಿ ಪೆಟ್ರೋಲ್ ಪಂಪು ಹತ್ತಿರದ ಬೃಹತ್ ಗುಡ್ಡವು ಏಕಾಏಕಿ ಕುಸಿದು ಬಿದ್ದಿದೆ. ಘಟನೆಯಿಂದ ಪೆಟ್ರೋಲ್ ಪಂಪ್ ಕಟ್ಟಡಕ್ಕೆ ಸ್ವಲ್ಪ ಹಾನಿಯಾಗಿದೆ. ಅಲ್ಲದೆ ಮಳೆ ಇನ್ನಷ್ಟು ಸುರಿದರೆ ಈ ಪ್ರದೇಶದ ಇನ್ನಷ್ಟು ಗುಡ್ಡ ಪ್ರದೇಶವು ಕುಸಿಯುವ ಅಪಾಯ ಎದುರಾಗಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷದ ಮಳೆಗಾಲದಲ್ಲಿ ಇಲ್ಲಿಗೆ ಸಮೀಪದ ಬೋಳಿಯಾರ್ ಪ್ರದೇಶದಲ್ಲಿಯೂ ಗುಡ್ಡ ಪ್ರದೇಶವು ಕುಸಿದು ಬಿದ್ದು ಕೃಷಿ ಪ್ರದೇಶಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿತ್ತು.

Also Read  ಗ್ರಾಹಕರಿಗೆ ಬಿಗ್ ಶಾಕ್..‼️ ➤ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ

error: Content is protected !!
Scroll to Top