ಪೊಲೀಸ್ ಸಿಬ್ಬಂದಿಗಳ ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ➤ ಕಾನ್‍ಸ್ಟೇಬಲ್ ಮೃತ್ಯು

(ನ್ಯೂಸ್ ಕಡಬ) newskadaba.com.ಮಂಡ್ಯ,ಜು.16:  ಪೊಲೀಸ್ ಸಿಬ್ಬಂದಿ ಸಂಚರಿಸುತ್ತಿದ್ದ ಎರಡು ಬೈಕ್​ಗಳ ನಡುವೆ ಡಿಕ್ಕಿಯಾಗಿ ಪೇದೆಯೊಬ್ಬರು ಸ್ಥಳದಲ್ಲೇ ಮೃತಪಟ್ಟು, ಎಎಸ್ಐ ಗಂಭೀರ ಗಾಯಗೊಂಡ ಘಟನೆ ಮಂಡ್ಯದಲ್ಲಿ ನಡೆದಿದೆ.

ಮದ್ದೂರು ತಾಲೂಕು ತೊರೆಶೆಟ್ಟಹಳ್ಳಿ ಗ್ರಾಮದಲ್ಲಿ ಇಂದು ಈ ಅವಘಡ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಪೇದೆ ಅರುಣ್(26) ಮೃತರು. ಕೆಸ್ತೂರಿನ ಎಎಸ್ಐ ಬಾಲಯ್ಯ ಗಾಯಗೊಂಡಿದ್ದು, ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತೊಪ್ಪನಹಳ್ಳಿಯ ವ್ಯಕ್ತಿಗೆ ಅರುಣ್ ಗನ್‌ಮ್ಯಾನ್ ಆಗಿದ್ದರು. ಕಾರ್ಯನಿಮಿತ್ತ ತೊರೆಶೆಟ್ಟಹಳ್ಳಿಗೆ ಆಗಮಿಸಿದ್ದರು. ಈ ವೇಳೆ ಪೇದೆ ಸವಾರಿ ಮಾಡುತ್ತಿದ್ದ ಬೈಕ್​ ಮತ್ತು ಎಎಸ್​ಐ ಕುಳಿತಿದ್ದ ಬೈಕ್​ ನಡುವೆ ಮುಖಾಮುಖಿ ಡಿಕ್ಕಿಯಾಗಿವೆ.

Also Read  ಕೊರೋನಾ ಅಪ್‍ಡೇಟ್ : ಇಂದು ಪುತ್ತೂರಿನ 6 ಮಂದಿಯಲ್ಲಿ ಕೋವಿಡ್ ದೃಢ

ಮೃತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮದ್ದೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಎಎಸ್ಪಿ ಡಾ.ಶೋಭಾರಾಣಿ, ಡಿವೈಎಸ್ಪಿ ಪೃಥ್ವಿ, ಸಿಪಿಐ ಪ್ರಸಾದ್ ಪರಿಶೀಲನೆ ನಡೆಸಿದರು.

error: Content is protected !!
Scroll to Top