ಕಡಬ: ತಾಲೂಕಿನ ಸೋಂಕಿತ ಬಡ ಮಹಿಳೆಯ ಕುಟುಂಬಕ್ಕೆ ಆಸರೆ

(ನ್ಯೂಸ್ ಕಡಬ)newskadaba.com ಪುತ್ತೂರು: ಜು.16, ಕೋವಿಡ್-19ನಿಂದಾಗಿ ಸಾಕಷ್ಟು ಮಂದಿಯ ಜೀವನವೇ ತತ್ತರಿಸಿ ಹೋಗಿದೆ. ಪ್ರಸ್ತುತ ಸಂಸದನಿಂದ ಬಡ ಜನರವರೆಗೂ ಸೋಂಕು ಅತೀ ವೇಗವಾಗಿ ವ್ಯಾಪಿಸಿ ದೇಶಾದ್ಯಂತ ಮತ್ತಷ್ಟು ತಲ್ಲಣವನ್ನೇ ಸೃಷ್ಟಿಸುತ್ತಿದೆ. ಇನ್ನೂ ಪರಿಪೂರ್ಣವಾಗಿ ಚೇತರಿಕೆಯಾದವರನ್ನು ಜನರು ಅನುಮಾನದಿಂದಲೇ ಕಾಣುತ್ತಿದ್ದಾರೆ ಎಂಬುವುದು ಕೂಡಾ ಹಲವೆಡೆಯಲ್ಲಿ ವರದಿಯಾಗಿವೆ. ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರನ್ನು ಹಲವು ಸಂಘಟನೆಯ ನೇತೃತ್ವದಲ್ಲಿ ಅಂತಿಮ ವಿಧಿವಿಧಾನಗಳು ನಡೆಸುವುದರೊಂದಿಗೆ ಮಾನವೀಯತೆ ಸದಾ ಜೀವಂತವಾಗಿದೆ. ಸೋಂಕು ತಗಲಿದ ಅತೀ ಕುಟುಂಬಗಳ ಕಣ್ಣೀರನ್ನು ಒರೆಸುವ ಕಾರ್ಯಕ್ಕೆ ಜಿಲ್ಲೆಯ ಸಾಮಾಜಿಕ ಮುಖಂಡರು ಹೆಜ್ಜೆಯಿಟ್ಟಿದ್ದಾರೆ. ಇಂತಹ ಒಂದು ಸನ್ನೀವೇಶ ತಾಲೂಕಿನಲ್ಲೂ ಸಾಕ್ಷಿಯಾಗಿದೆ.

ಶಾಂತಿಗೋಡು ನಿವಾಸಿಯೊರ್ವರಿಗೆ ಜುಲೈ 1ರಂದು ಸೋಂಕು ದೃಢಪಟ್ಟಿತ್ತು. ಇವರು ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಅಡುಗೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸೋಂಕಿತ ಬಡ ಮಹಿಳೆಯ ಪುತ್ರಿ ಉಷಾರವರು ಖಾಸಗಿ ಸುದ್ದಿ ವಾಹಿನಿ ಪಬ್ಲಿಕ್ ಟಿವಿಯ ಮನೆ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆ ಮಾಡಿ, ನನ್ನ ತಾಯಿಗೆ ಕರ್ತವ್ಯದಲ್ಲಿದ್ದಾಗ ಕೊರೋನಾ ಸೋಂಕು ತಗುಲಿ ಚಿಕಿತ್ಸೆ ಪಡೆದು ಹೋಂ ಕ್ವಾರೆಂಟೈನ್‌ನಲ್ಲಿದ್ದರು. ಎರಡು ತಿಂಗಳಿನಿಂದ ವೇತನವಾಗಿರಲಿಲ್ಲ, ತಂದೆಗೂ ಉದ್ಯೋಗವಿಲ್ಲದೇ ಜೀವನದ ನಿರ್ವಹಣೆಗೆ ಸಂಕಷ್ಟ ಎದುರಿಸಬೇಕಾಗಿದೆ ಅಲ್ಲದೇ ಕೊರೋನಾ ಭೀತಿಯಿಂದಾಗಿ ಸ್ಥಳೀಯರು ಯಾರೂ ಹತ್ತಿರ ಬರುತ್ತಿಲ್ಲ ಎಂದು ತನ್ನ ಅಳಲನ್ನು ತೋಡಿಕೊಂಡಿದ್ದರು. ಇದೀಗ ತೀರಾ ಬಡತನದಲ್ಲಿರುವ ಕುಟುಂಬದ ಮನೆಗೆ ತೆರಳಿ ಕಡಬದ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಹಾಜಿ ಮಹಮ್ಮದ್ ರಫೀಕ್ ಕೊಡಾಜೆಯವರು ಅಗತ್ಯ ದಿನಸಿ ತಿಂಗಳಿಗಾಗುವಷ್ಟು ನೀಡಿ ಕುಟುಂಬಕ್ಕೆ ಆತ್ಮಸ್ಥೈರ್ಯವನ್ನು ತುಂಬಿದ್ದಾರೆ. ಈ ಬಗ್ಗೆ ಖಾಸಗಿ ವಾಹಿನಿ ಪಬ್ಲಿಕ್ ಟಿವಿ ಪ್ರತಿನಿಧಿಯೊರ್ವರು ಮಧ್ಯಪ್ರವೇಶಿಸಿರುವುದರಿಂದ ಮಹಿಳೆಗೆ ಅಡುಗೆ ಗುತ್ತಿಗೆದಾರರು ಒಂದು ತಿಂಗಳ ವೇತನ ನೀಡಿದ್ದು, ಬಾಕಿ ಹಣವನನ್ನು ಶೀಘ್ರವೇ ನೀಡುವುದಾಗಿ ಭರವಸೆ ನೀಡಿದ್ದಾರೆ. ಸೋಂಕಿತ ಮಹಿಳೆ ವಾಹಿನಿಗೆ ಮತ್ತು ಸಹಾಯ ಮಾಡಿದ ರಫೀಕ್‌ರವರಿಗೆ ಆಭಾರಿಯಾಗಿದ್ದಾನೆ ಎಂದಿದ್ದಾರೆ.

Also Read  ಅನುದಾನ ಬಿಡುಗಡೆಗೆ ಸಚಿವ ರೈ ಅವರಿಂದ ತಡೆ ► ಶಾಸಕ ಅಂಗಾರ ಆರೋಪ

error: Content is protected !!
Scroll to Top