ವಿಟ್ಲ: ಸೆಲೂನ್ ಮಾಲಕರಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ)newskadaba.com ವಿಟ್ಲ: ಜು.16, ಇಲ್ಲಿನ ಪುತ್ತೂರು ರಸ್ತೆಯ ಪಕ್ಕದ ಕಟ್ಟಡವೊಂದರಲ್ಲಿ‌ ಸೆಲೂನ್ ಹೊಂದಿರುವ ಉತ್ತರಪ್ರದೇಶ ಮೂಲದ 35 ವರ್ಷ ವಯಸ್ಸಿನ ವ್ಯಕ್ತಿಯೋರ್ವರಲ್ಲಿ ಕೊರೋನ ಪಾಸಿಟಿವ್ ಬಂದಿದೆ.

ಇವರಿಗೆ ಕಳೆದ ಕೆಲದಿನಗಳಿಂದ ಕಾಡುತ್ತಿದ್ದ ಅನಾರೋಗ್ಯದಿಂದಾಗಿ ಆರೋಗ್ಯ‌ ಇಲಾಖಾ ವತಿಯಿಂದ ಕೋವಿಡ್ ಟೆಸ್ಟ್ ನಡೆಸಲಾಗಿತ್ತು.‌ ಇದೀಗ ಬಂದಿರುವ ವರದಿಯ ಪ್ರಕಾರ ಅವರಿಗೆ ಕೊರೋನ ಸೋಂಕು ಇರುವುದು ದೃಡಪಟ್ಟಿದೆ. ಇವರು ವಿಟ್ಲ ಮೇಗಿನ ಪೇಟೆಯಲ್ಲಿರುವ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದು, ಇದೀಗ ಅವರು ವಾಸಿಸುತ್ತಿದ್ದ ಬಾಡಿಗೆ ಮನೆಯ ಪಕ್ಕದಲ್ಲಿರುವ ಇತರ ಮನೆಯವರಲ್ಲೂ ಆತಂಕ ಉಂಟಾಗಿದೆ.

Also Read  ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬಿತ್ತಲು ಸಲಹೆ

error: Content is protected !!
Scroll to Top