ಪೊಲೀಸರ ನಂತರ ಅರಣ್ಯ ಇಲಾಖೆಗೂ ತಟ್ಟಿದ ಕೊರೋನಾ ಬಿಸಿ ➤ ಕಡಬದ ಇಬ್ಬರು ಸೇರಿದಂತೆ ಉಭಯ ತಾಲೂಕಿನ 9 ಮಂದಿಗೆ ಸೋಂಕು ದೃಢ

(ನ್ಯೂಸ್ ಕಡಬ)newskadaba.com ಪುತ್ತೂರು: ಜು.16, ಇತ್ತೀಚೆಗೆ ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ಓರ್ವರ ತಾಯಿ ಮತ್ತು ಕಾನ್‌ಸ್ಟೇಬಲ್ ಒಬ್ಬರಿಗೆ ಕೊರೋನಾ ದೃಢಪಟ್ಟ ಬೆನ್ನಲ್ಲೇ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದು, ಕ್ವಾರಂಟೈನ್‌ನಲ್ಲಿದ್ದವರ ಪೈಕಿ ನಗರ ಪೊಲೀಸ್ ಠಾಣೆಯ ಇಬ್ಬರಿಗೆ ಹಾಗೂ ಮಹಿಳಾ ಪೊಲೀಸ್ ಠಾಣೆಯ ಜೀಪು ಚಾಲಕರೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದರ ನಡುವೆ ಹೊಸದಾಗಿ ಪುತ್ತೂರು ವಲಯ ಅರಣ್ಯ ಇಲಾಖಾ ಸಿಬಂದಿಗೂ ಕೊರೋನಾ ದೃಢಪಟ್ಟಿದ್ದು, ಈ ಮೂಲಕ ಪುತ್ತೂರು ಹಾಗೂ ಕಡಬ ಉಭಯ ತಾಲೂಕಿನಲ್ಲಿ 9 ಕೊರೋನಾ ಪ್ರಕರಣಗಳು ಪತ್ತೆಯಾಗಿದೆ.

Also Read  ಪಿಂಚಣಿ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ- ರಾಜರಾಜೇಶ್ವರಿ

ಕಡಬ ತಾಲೂಕಿನಲ್ಲಿ ಮಸ್ಕತ್ ನಿಂದ ಜುಲೈ 12ರಂದು ಆಗಮಿಸಿ ಮಂಗಳೂರಿನಲ್ಲಿ ಕ್ವಾರಂಟೈನ್‌ನಲ್ಲಿರುವ ಕೋಡಿಂಬಾಳ ನಿವಾಸಿ 59 ವರ್ಷ ಪ್ರಾಯದ ವ್ಯಕ್ತಿ ಹಾಗೂ ಅವರ 6 ವರ್ಷದ ಪುತ್ರನಿಗೂ ಕೊರೋನಾ ದೃಢಪಟ್ಟಿದೆ. ಇವರು ಮಂಗಳೂರು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

error: Content is protected !!
Scroll to Top