(ನ್ಯೂಸ್ ಕಡಬ) newskadaba.com. ಉಡುಪಿ,ಜು.16: ಕೊರೊನಾ ಬಾಧೆಯಿಂದಾಗಿ ಈಗಾಗಲೇ ಹಲವು ಭಾಗಗಳಲ್ಲಿ ಆಸ್ಪತ್ರೆ, ಮನೆ, ಪೊಲೀಸ್ ಸ್ಟೇಷನ್,ಬ್ಯಾಂಕ್, ಅಂಗಡಿ ಮುಂಗಟ್ಟು ಸೀಲ್ ಡೌನ್ ಆಗಿತ್ತು ಇದೀಗ ಅಂತದ್ದೆ ಇನ್ನೊಂದು ಪ್ರಕರಣ ಉಡುಪಿಯಲ್ಲಿ ವರದಿಯಾಗಿದೆ.
ಗ್ಯಾಂಗ್ರಿನ್ ಸಮಸ್ಯೆಯಿಂದ ದಾಖಲಾಗಿದ್ದ ರೋಗಿಯಿಂದ ಕೊರೊನಾ ಹರಡಿದೆ ಎಂದು ಶಂಕಿಸಲಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಗೆ ಜ್ವರ ಕಾಣಿಸಿಕೊಂಡಿದ್ದು, ಗಂಟಲ ದ್ರವ ಪರೀಕ್ಷೆಯ ಬಳಿಕ ರೋಗಿಗೆ ಕೊರೊನಾ ದೃಢಪಟ್ಟಿತ್ತು, ಈತನ ವಾರ್ಡ್‌ನಲ್ಲಿದ್ದ 9 ರೋಗಿಗಳಿಗೂ ಕೊರೊನಾ ಸೋಂಕು ತಗುಲಿದೆ. ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಇಬ್ಬರು ವೈದ್ಯರು, ಓರ್ವ ನರ್ಸ್ ಸೇರಿದಂತೆ ವಾರ್ಡ್‌ನಲ್ಲಿ ಸ್ವಚ್ಛತಾ ಕೆಲಸ ಮಾಡಿದ ಸಿಬ್ಬಂದಿಗೂ ಕೊರೊನಾ ದೃಢಪಟ್ಟಿದ್ದು, ಓರ್ವ ಕೊರೊನಾ ಸೋಂಕಿತ ವೈದ್ಯರು ಕೊರೊನಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೇ, ಸೋಂಕಿತರ ಸಂಪರ್ಕಕ್ಕೆ ಬಂದವರಿಗೆ ಸದ್ಯ ಗೃಹ ದಿಗ್ಭಂಧನ ಮಾಡಲಾಗಿದ್ದು, ಸೋಂಕಿತರ ವಾರ್ಡ್ ಸೇರಿದಂತೆ ಶಸ್ತ್ರಚಿಕಿತ್ಸೆ ಮಾಡಿದ ಕೊಠಡಿಯನ್ನು ಕೂಡಾ ಸೀಲ್‌ಡೌನ್ ಮಾಡಲಾಗಿದೆ.
ಸದ್ಯ ತುರ್ತು ಚಿಕಿತ್ಸೆ ಮಾತ್ರ ಲಭ್ಯವಿದೆ. ಅಲ್ಲದೇ, ಶಂಕಿತ ಕೊರೊನಾ ರೋಗಿಗಳಿರುವ ಪ್ರತ್ಯೇಕಿತ ವಾರ್ಡ್‌ಗಳು ಮಾತ್ರವೇ ಕಾರ್ಯನಿರ್ವಹಿಸಲಿವೆ ಎನ್ನಲಾಗಿದೆ. ಸದ್ಯಕ್ಕೆ ಒಳರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವುದಿಲ್ಲ. ಅಲ್ಲದೇ ಆಸ್ಪತ್ರೆಯಲ್ಲಿ ಹೊರರೋಗಿಯ ವಿಭಾಗವೂ ಕೂಡಾ ಸೇವೆಗೆ ಲಭ್ಯವಿರುದಿಲ್ಲ. ಇನ್ನು ಆಸ್ಪತ್ರೆಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಎರಡು ದಿನಗಳ ನಂತರವೇ ಆಸ್ಪತ್ರೆ ತೆರೆಯಲಿದೆ.ಎಂದು ತಿಳಿದು ಬಂದಿದೆ.