ಕುಖ್ಯಾತ ದರೋಡೆಕೋರನ ಬಂಧಿಸಿದ ಪಣಂಬೂರು ಪೊಲೀಸರು

(ನ್ಯೂಸ್ ಕಡಬ) newskadaba.com.ಮಂಗಳೂರು,ಜು.16: ದರೋಡೆ, ಹಲ್ಲೆ, ಅಪಘಾತ ಸಹಿತ ಹತ್ತಕ್ಕೂ ಅಧಿಕ ಅಪರಾಧ ಪ್ರಕರಣದಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಕುಖ್ಯಾತ ದರೋಡೆಕೋರ ಶಮ್ಮಿ ಯಾನೇ ಶಮೀರ್ ಕಾಟಿಪಳ್ಳ (30)ನನ್ನು ಬೆಳ್ಳಿಯಪ್ಪ ನೇತೃತ್ವದ ಪಣಂಬೂರು ರೌಡಿ ನಿಗ್ರಹದಳ ಹಾಗೂ ಪಣಂಬೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಈತ ಪಣಂಬೂರು ಬಂದರು ವ್ಯಾಪ್ತಿಯಲ್ಲಿ ಬರುವ ಲಾರಿ ಚಾಲಕರಿಗೆ ಹಲ್ಲೆಗೈದು ದರೋಡೆ ಮಾಡಿ ಪರಾರಿಯಾಗುತ್ತಿದ್ದ. ಈ ಹಿಂದೆ ಎಎಸ್ಐ ಒಬ್ಬರಿಗೆ ರಾಡ್ ನಿಂದ ಮಾರಣಾಂತಿಕ ಹಲ್ಲೆಗೈದಿದ್ದ. ಬೆಂಜನ ಪದವಿನಲ್ಲಿ ದ್ವಿಚಕ್ರ ವಾಹನಕ್ಕೆ ತನ್ನ ವಾಹನ ಢಿಕ್ಕಿ ಹೊಡೆಸಿ ಪರಾರಿಯಾಗಿದ್ದ. ಈತನ ವಿರುದ್ದ ಹಲವಾರು ವಾರೆಂಟ್ ಜಾರಿಯಾಗಿದ್ದು ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡು ತಿರುಗಾಡುತ್ತಿದ್ದ. ಬುಧವಾರ ಈತನ ಅಡಗುತಾಣದ ಬಗ್ಗೆ ಸುಳಿವು ಪಡೆದು ದಾಳಿ ನಡೆಸಿದ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.

Also Read  ವಿದ್ಯಾರ್ಥಿ ನಿಲಯಗಳ ದಾಖಲಾತಿ - ಅರ್ಜಿ ಆಹ್ವಾನ

error: Content is protected !!
Scroll to Top