ಸಹೋದರನಿಗೆ ಕೊರೋನಾ ದೃಢ ➤ ಗಂಗೂಲಿಗೆ ಹೋಂ ಕ್ವಾರಂಟೈನ್

(ನ್ಯೂಸ್ ಕಡಬ)newskadaba.com ಕೋಲ್ಕತ್ತಾ: ಜು.16, ಸೌರವ್ ರ ಹಿರಿಯ ಸಹೋದರ ಮತ್ತು ಬೆಂಗಾಲ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಸ್ನೇಹಷೀಶ್ ಗಂಗೂಲಿಗೆ ಕೋವಿಡ್-19 ಸೋಂಕು ದೃಢವಾದ ಹಿನ್ನಲೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

ಬಂಗಾಳದ ಮಾಜಿ ರಣಜಿ ಆಟಗಾರರಾಗಿದ್ದ ಸ್ನೇಹಷೀಶ್ ಗಂಗೂಲಿ ಅವರಿಗರ ಕೋವಿಡ್-19 ದೃಢಪಟ್ಟಿದ್ದು, ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರು ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಇದೀಗ ಕೋವಿಡ್ ಸೋಂಕು ದೃಢವಾಗಿದೆ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ ತಿಳಿಸಿದೆ.

Also Read  ಕಡಬ: ತಿಂಗಳುಗಳ ಬಳಿಕ ಮನೆಗೆ ಹಿಂತಿರುಗಿದ ಯುವಕ ➤ ನಾಪತ್ತೆ ಪ್ರಕರಣ ಸುಖಾಂತ್ಯ

error: Content is protected !!
Scroll to Top