ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ದ್ವಿತೀಯ ವಾರ್ಷಿಕೋತ್ಸವ ➤ ಉಚಿತ ಸಸಿ ವಿತರಣೆ

(ನ್ಯೂಸ್ ಕಡಬ)newskadaba.com ಮಂಗಳೂರು: ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ(ರಿ) ವತಿಯಿಂದ ಸಂಸ್ಥೆಯ ಎರಡನೇ ವರ್ಷದ ಅಂಗವಾಗಿ ಉಚಿತ ಸಸಿ ವಿತರಣೆ ಕಾರ್ಯಕ್ರಮವು ಮರಿಯಾಶ್ರಮ ಶಾಲೆ ತಲಪಾಡಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಪ್ರಿನ್ಸಿಪಾಲ್ ಸಿಸ್ಟರ್ ಮೇರಿ ಪಿಂಟೋ ಮಾತನಾಡಿ, ಸಾಮಾಜಿಕ ಚಿಂತನೆಗಳನ್ನು ಇಟ್ಟುಕೊಂಡು ತಾವು ಮಾಡುತ್ತಿರುವ ಈ ಸೇವೆ ಪ್ರಶಂಸಾರ್ಹ. ಸಂಸ್ಥೆಯ ಎರಡನೇ ವರ್ಷದ ಅಂಗವಾಗಿ ಪರಿಸರದ ಮಹತ್ವವನ್ನು ಅರಿತು ನಮ್ಮ ಸಂಸ್ಥೆಗೆ ಉಚಿತ ಸಸಿಯನ್ನು ನೀಡಿದ್ದೀರಾ, ಗಡಿನಾಡುಗಳಲ್ಲಿ ಹಿಂದುಳಿದಿರುವಂತಹ ಇಂತಹ ಶಾಲೆಗಳನ್ನು ಗುರುತಿಸಿ ನೀವು ನೀಡುತ್ತಿರುವ ಸೇವೆ ನಿಜಕ್ಕೂ ಅಭಿನಂದಾರ್ಹ ಎಂದು ಅವರು ತಿಳಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಸಂವಹನ ಕಾರ್ಯದರ್ಶಿ ಕೆ.ಪಿ‌. ಬಾತಿಶ್ ತೆಕ್ಕಾರು ಮಾತನಾಡಿ
ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಸೇವೆ ಕೇವಲ ರಕ್ತಕ್ಕೆ ಮಾತ್ರ ಸೀಮಿತವಾಗಿಲ್ಲ. ಲಾಕ್ ಡೌನ್ ಸಮಯದಲ್ಲಿ ಈ ಸಂಸ್ಥೆ ನಡೆಸಿದ ಪ್ರತಿಯೊಂದು ಕಾರ್ಯಾಚರಣೆಯು ಶ್ಲಾಘನೀಯ, ಇದೀಗ ತಮ್ಮ ಸೇವೆ ಕರ್ನಾಟಕದ ಗಡಿ ದಾಟಿದೆ ಎಂದು ಹೇಳಿದರು. ಸಮಾಜ ಸೇವೆಯ ದೃಷ್ಟಿಯಿಂದ ಪರಿಸರ ಪ್ರೇಮವ ಮೈಗೂಡಿಸಿಕೊಂಡು ಉಚಿತ ಸಸಿಯನ್ನು ವಿತರಿಸಿ, ಸನ್ನದ್ದ ಬ್ಲಡ್ ಹೆಲ್ಪ್ ಕೇರ್ ತಂಡ ಈ ಬಾರಿ ಮಳೆಯ ನಡುವೆಯೂ ಗಿಡ ನೆಟ್ಟು, ಬೇಲಿ ಹಾಕಿ ಪರಿಸರ ಪ್ರೇಮ ಮೆರೆದರು. ಕಾರ್ಯಕ್ರಮದಲ್ಲಿ ನಝೀರ್ ಹುಸೈನ್ ಅಧ್ಯಕ್ಷತೆಯನ್ನು ವಹಿಸಿದ್ದರು. ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಗೌರವಾಧ್ಯಕ್ಷ
ಇಫ್ತಿಕಾರ್, ಕೋಶಾಧಿಕಾರಿ ಸತ್ತಾರ್ ಪುತ್ತೂರು ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಸಂಸ್ಥೆಯ ನಿರ್ವಾಹಕರಾದ ಅಲ್ಮಾಝ್ ಉಳ್ಳಾಲ, ಬಶೀರ್, ಇಮ್ತಿಯಾಝ್ ಬಜ್ಪೆ, ಮರಿಯಾಶ್ರಮ ಚರ್ಚ್ ಮಂಡಳಿಯ ಉಪಾಧ್ಯಕ್ಷ ಫ್ರಾನ್ಸ್ ಡಿಸೋಜಾ ಹಾಗು ಮಾರ್ಸಲ್ ಡಿಸೋಜಾ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸಫ್ವಾನ್ ಕಲಾಯಿ ಸ್ವಾಗತಿಸಿ ವಂದಿಸಿದರು. ಮುಸ್ತಫಾ ಕೆ.ಸಿ.ರೋಡ್ ನಿರೂಪಿಸಿದರು.

Also Read  ಅಕ್ರಮ ಮರಳು ಸಾಗಾಣಿಕೆ ➤ ಟ್ರ್ಯಾಕ್ಟರ್ ವಶಕ್ಕೆ..!!

error: Content is protected !!
Scroll to Top