(ನ್ಯೂಸ್ ಕಡಬ) newskadaba.com.ಮಂಗಳೂರು,ಜು.15: ಕೋವಿಡ್-19 ಸೋಂಕಿತರನ್ನು ತಪಾಸನೆ ಮಾಡಿ ರ್ಯಾಪಿಡ್ ಫಲಿತಾಂಶ ನೀಡುವ ಆ್ಯಂಟಿಜೆನ್ ಕಿಟ್‍ನ ಬಳಕೆಯನ್ನು ಜು.14ರಿಂದ ದಕ್ಷಿಣ ಕನ್ನಡದಲ್ಲಿ ಆರಂಭಿಸಲಾಗಿದೆ.
ಈ ಹಿಂದೆ ಕೊರೊನಾ ಸೋಂಕು ಇದೆಯೇ ಇಲ್ಲವೇ ಎಂದು ಪತ್ತೆ ಹಚ್ಚಲು ಎರಡು ದಿನಗಳ ಕಾಲ ಕಾಯಬೇಕಿತ್ತು. ಆ್ಯಂಟಿಜೆನ್ ಟೆಸ್ಟ್ ನಿಂದ 15 ರಿಂದ 20 ನಿಮಿಷದಲ್ಲಿ ಕೊರೊನಾ ಪಾಸಿಟಿವ್ ಪತ್ತೆ ಹಚ್ಚಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಗೆ ಇಂತಹ 3500 ಕಿಟ್ ರಾಜ್ಯ ಸರ್ಕಾರದಿಂದ ಪೂರೈಕೆಯಾಗಿದೆ.
ಈ ಕಿಟ್ ನಲ್ಲಿ ಇರುವ ಸ್ಟ್ರಿಪ್ ನಲ್ಲಿ ಗಂಟಲು ದ್ರವದ ಮಾದರಿಯ ಹನಿಯನ್ನು ಹಾಕಿದರೆ 15 ನಿಮಿಷದಲ್ಲಿ ಫಲಿತಾಂಶ ಸಿಗುತ್ತದೆ. ಸ್ಟಿಪ್ ನಲ್ಲಿ ಕೆಂಪು ಬಣ್ಣದ ಗೆರೆ ಬಂದರೆ ಪಾಸಿಟಿವ್ ಎಂದು ಗೆರೆ ಬಾರದಿದ್ದರೆ ನೆಗೆಟಿವ್ ಎಂದು ಫಲಿತಾಂಶ ಬರಲಿದೆ. ಸದ್ಯ ಕ್ಕೆ ವಿದೇಶದಿಂದ ಬಂದವರು, ಸರ್ಜರಿ ಮಾಡುವವರು ಮತ್ತು ಸಾವನ್ನಪ್ಪಿದವರ ಕೊರೊನಾ ಟೆಸ್ಟ್ ಗೆ ಇದನ್ನು ಬಳಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.