ಬಂಟ್ವಾಳ ಹೋಮ್ ಕ್ವಾರಂಟೈನ್ ನಿಯಮ ಮೀರಿದಾತನ ವಿರುದ್ಧ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com.ಬಂಟ್ವಾಳ,ಜು.15:  ಕೊರೊನಾ ತನ್ನ ವೇಗವನ್ನು ಹೆಚ್ಚಿಸುತ್ತಾ ಮುಂದುವರಿಯುತ್ತಿದೆ ಇದರ ನಡುವೆ ವ್ಯಕ್ತಿಯೊಬ್ಬರ ವಿರುದ್ಧ ಹೋಮ್ ಕ್ವಾರಂಟೈನ್ ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದ ಆರೋಪದಡಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ತುಂಬೆ ಗ್ರಾಮದ ಕಾಣೆಮಾರ್ ನಿವಾಸಿ ಸಾಹಿದ್ (32) ವಿರುದ್ಧ ಕಾನೂನು ಉಲ್ಲಂಘಿಸಿದ ಆರೋಪ ಕೇಳಿಬಂದಿರುವುದು. ಸಾಹಿದ್ ಗೆ ಜು.೦೯ ರಿಂದ ಜು.23 ರವರೆಗೆ ಹೋಮ್ ಕಾರಂಟೈನ್ ಇರುವಂತೆ ತುಂಬೆ ಗ್ರಾಮ ಪಂಚಾಯತ್ ನಿಂದ ನೋಟಿಸು ಕೂಡ ಜಾರಿ ಮಾಡಿತ್ತು. ಆದರೆ ಜುಲೈ 14 ರಂದು ಬಂಟ್ವಾಳ ಪೊಲೀಸ್ ಠಾಣಾ ಸಿಬ್ಬಂದಿ ಮದ್ಯಾಹ್ನ ಹೋಮ್ ಕಾರಂಟೈನಲ್ಲಿದ್ದ ಸಾಹಿದ್ ನನ್ನು ಪರಿಶೀಲಿಸಲು ಬಂದಾಗ ಆತ ಮನೆಯಲ್ಲಿರಲಿಲ್ಲ. ಈ ಬಗ್ಗೆ ಮನೆಯವರ ಬಳಿ ವಿಚಾರಿಸಿದಾಗ ಸಮರ್ಪಕವಾದ ಉತ್ತರ ಸಿಗಲಿಲ್ಲ ಕೊವೀಡ್ ನಿಮಿತ್ತ ಸರ್ಕಾರ ಅದೇಶಿಸಿರುವ ಹೋಮ್ ಕಾರಂಟೈನ್ ನಿಯಮಾವಳಿಗಳನ್ನು ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಿಗೆ ತೆರಳಿ ಜನರೊಂದಿಗೆ ಬೆರೆತಿರುವುದು ತಿಳಿದು ಬಂದಿದೆ.

Also Read  ನಿಯಮ ಉಲ್ಲಂಘಿಸುವ ಚಾಲಕರ ಲೈಸೆನ್ಸ್ ಅಮಾನತು..!

ಹೀಗಾಗಿ ಇತನ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ : 269,270, 271 ಐಪಿಸಿ ಮತ್ತು ಕಲಂ 5(1) ಕರ್ನಾಟಕ ಎಪಿಡೆಮಿಕ್ ಡಿಸೀಸ್ ಆರ್ಡಿನೆನ್ಸ್ ಕಾಯ್ದೆ 2020 ಯಂತೆ ಪ್ರಕರಣ ದಾಖಲಿಸಲಾಗಿದೆ.

error: Content is protected !!
Scroll to Top