ಬೆಳ್ಳಾರೆ: ಕೋಳಿ ಅಂಕಕ್ಕೆ ದಾಳಿ

(ನ್ಯೂಸ್ ಕಡಬ)newskadaba.com ಬೆಳ್ಳಾರೆ, ಜು.13, ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕೋಳಿ ಅಂಕ ಹಾಗೂ ಜೂಜಾಟ ನಡೆಸುತ್ತಿರುವ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಬೆಳ್ಳಾರೆ ಪೊಲೀಸರು ಜೂಜಾಟದಲ್ಲಿ ನಿರತರಾಗಿದ್ದ ಆರು ಮಂದಿಯನ್ನು ಬಂಧಿಸಿ 13 ಕೋಳಿಗಳು ಹಾಗೂ ನಗದು ವಶಪಡಿಸಿಕೊಂಡ ಘಟನೆ ಕೊಡಿಯಾಲ ಗ್ರಾಮದ ಬೇರ್ಯ ಎಂಬಲ್ಲಿ ನಡೆದಿದೆ.

 

ಕೋಳಿ ಅಂಕ ನಿರತರಾಗಿದ್ದ ಹುಕ್ರಪ್ಪ ಶೆಟ್ಟಿ ಕೋಡಿಮಜಲು, ಪಾಂಡುರಂಗ ಕೆ. ಕೈಕುಡೆ, ಸುಂದರ ಎಂ. ಮರಿಕೈ, ವಿಶ್ವಾಸ್ ಕೆ. ಪಲ್ಲತ್ತಾರು, ಉಮೇಶ್ ಗೌಡ ಕೈಕುಡೆ, ಚೇತನ್ ಕೆ. ಕಾಯರ್ತಡ್ಕ ಎಂಬವರನ್ನು ಬಂಧಿಸಿ 13 ಹುಂಜ ಕೋಳಿಗಳು ಹಾಗೂ 9350 ರೂಪಾಯಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಬೆಳ್ಳಾರೆ ಠಾಣಾ ಎಸ್ಐ ಆಂಜನೇಯ ರೆಡ್ಡಿ, ಸಿಬ್ಬಂದಿಗಳಾದ ಬಾಲಕೃಷ್ಣ, ಪ್ರವೀಣ್ ಬಾರ್ಕಿ, ಸಂತೋಷ್ ಮೊದಲಾದವರು ಭಾಗವಹಿಸಿದ್ದರು.

error: Content is protected !!
Scroll to Top