ಕೋವಿಡ್-19 ಇವತ್ತಿನಿಂದ ತೆಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಯಂ ಪ್ರೇರಿತ ಬಂದ್

(ನ್ಯೂಸ್ ಕಡಬ) newskadaba.com.ಉಪ್ಪಿನಂಗಡಿ,ಜು.14: ಕೋವಿಡ್-19 ದಿನನಿತ್ಯ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬೆಳ್ತಂಗಡಿ ಶಾಸಕರ ಮತ್ತು ತೆಕ್ಕಾರು ಗ್ರಾಮ ಪಂಚಾಯತ್ ನಿರ್ದೇಶನದಂತೆ ತೆಕ್ಕಾರು ಗ್ರಾಮ ಪಂಚಾಯತ್ ಇವತ್ತಿನಿಂದ ಜುಲೈ 28 ರ ವರೆಗೆ ಸ್ವಯಂ ಪ್ರೇರಿತ ಬಂದ್ ನಡೆಸಲಾಗುವುದು ಎಂದು ತೆಕ್ಕಾರು ಗ್ರಾಮ ವರ್ತಕರ ಮುಖ್ಯಸ್ಥ ಎ.ಟಿ ಅಶ್ರಫ್ ತೆಕ್ಕಾರು ತಿಳಿಸಿದರು.

ಇವತ್ತಿನಿಂದಲೇ ಮದ್ಯಾಹ್ನ 3 ರಿಂದ ಬೆಳಿಗ್ಗೆ 6ರ ವರೆಗೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಲಾಗುತ್ತದೆ. ತೆಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ವೇಳೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಪಂಚಾಯತ್ ಅಧಿಕೃತ ಆದೇಶದಲ್ಲಿ ತಿಳಿಸಿದೆ.
ತೆಕ್ಕಾರು ವ್ಯಾಪ್ತಿಯ ನಾಗರೀಕರು ಸ್ವಯಂ ಪ್ರೇರಿತ ಬಂದ್ ಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಜಿಲ್ಲಾಡಳಿತ ಗುರುವಾರದಿಂದ ಸಂಪೂರ್ಣ ಲಾಕ್-ಡೌನ್ ಸೂಚಿಸಿದ್ದು ಕಾರ್ಯವೈಖರಿಗೆ ಬಂದರೆ ಅದಕ್ಕೂ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಅವರು ತಿಳಿಸಿದರು.

Also Read  ಉಡುಪಿ: ಅಕ್ರಮ ಮದ್ಯ ಮಾರಾಟ ವಿರುದ್ದ ಕಠಿಣ ಕ್ರಮ ➤ ಡಿಸಿ ಕೂರ್ಮಾರಾವ್ ಎಂ ಎಚ್ಚರಿಕೆ

error: Content is protected !!
Scroll to Top