ಪಾಣೆಮಂಗಳೂರು ಸೇತುವೆಯಿಂದ ಹಾರಿದ್ದ ಮಹಿಳೆಯ ಮೃತದೇಹ ಪತ್ತೆ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಜು. 13, ಶನಿವಾರದಂದು ಬೆಳಗ್ಗಿನಿಂದ ನಾಪತ್ತೆಯಾಗಿದ್ದ ಮೂಡ ಗ್ರಾಮದ ಮಹಿಳೆಯೋರ್ವರ ಮರಥದೇಹವು ತುಂಬೆ ಸಮೀಪದ ನೇತ್ರಾವತಿ ನದಿಯಲ್ಲಿ ಇಂದು ಪತ್ತೆಯಾಗಿದೆ.

ಮೃತರನ್ನು ಗೋಪಿ ಪೂಜಾರಿ(49) ಎಂದು ಗುರುತಿಸಲಾಗಿದೆ. ಇವರು ಬಿ.ಸಿ.ರೋಡಿನ ಚಿಕ್ಕಯ್ಯಮಠ ಎಂಬಲ್ಲಿ ತನ್ನ ಸಹೋದರಿಯ ಮನೆಗೆ ಕಳೆದ ಕೆಲ ದಿನಗಳ ಹಿಂದೆ ಬಂದಿದ್ದು, ಜೂ.10 ರ ಶುಕ್ರವಾರದಂದು ರಾತ್ರಿ ಊಟ ಮಾಡಿ ಮಲಗಿದ್ದ ಇವರು ಶನಿವಾರ ಮುಂಜಾನೆ ಕಾಣೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬಿಕರು ಹುಡುಕಾಟ ನಡೆಸಿದಾಗ ಪಾಣೆಮಂಗಳೂರು ನೂತನ ಸೇತುವೆ ಬಳಿ ಕೈಯಲ್ಲಿದ್ದ ಬಳೆ ಹಾಗೂ ಧರಿಸಿದ್ದ ಶಾಲು ಪತ್ತೆಯಾಗಿತ್ತು. ಹೀಗಾಗಿ ಮುಳುಗುತಜ್ಞರು ಹುಡುಕಾಟ ನಡೆಸಿದ್ದರು. ಇಂದು ತುಂಬೆ ಸಮೀಪ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಹಾಡು ಹಗಲಲ್ಲೇ ಉದ್ಯಮಿ ಹತ್ಯೆ ➤ ಬೆಚ್ಚಿ ಬೆದ್ದ ಮುಲ್ಕಿ

error: Content is protected !!
Scroll to Top