ಬಹರೈನ್, ಮಸ್ಕತ್‌ನಿಂದ ವಂದೇ ಭಾರತ್ ಯೋಜನೆಯಡಿ 334 ಮಂದಿ ಮಂಗಳೂರಿಗೆ

(ನ್ಯೂಸ್ ಕಡಬ) newskadaba.com.ಮಂಗಳೂರು,ಜು.13:  ಕೊರೋನ ಕಾರಣದಿಂದ ಬಹರೈನ್ ಹಾಗೂ ಮಸ್ಕತ್‌ನಲ್ಲಿದ್ದ ಸಿಲುಕಿದ್ದ ಒಟ್ಟು 334 ಅನಿವಾಸಿ ಕನ್ನಡಿಗರು ವಂದೇ ಭಾರತ್ ಯೋಜನೆಯಡಿ ರವಿವಾರ ಸಂಜೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.

ಎಲ್ಲಾ ಪ್ರಯಾಣಿಕರಿಗೆ ಜಿಲ್ಲಾಡಳಿತದ ಸಾಂಸ್ಥಿಕ ಕ್ಬಾರಂಟೈನ್ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ನೋಡಲ್ ಅಧಿಕಾರಿ ಯತೀಶ್ ಉಳ್ಳಾಲ್ ತಿಳಿಸಿದ್ದಾರೆ. ಸಂಜೆ 4:40ಕ್ಕೆ ಬಹರೈನ್‌ನಿಂದ 107 ಪುರುಷರು ಹಾಗೂ 49 ಮಹಿಳೆಯರು ಸೇರಿದಂತೆ 156 ಪ್ರಯಾಣಿಕರು ಆಗಮಿಸಿದ್ದಾರೆ. ಮಸ್ಕತ್‌ನಿಂದ ಸಂಜೆ 5:30ಕ್ಕೆ ಆಗಮಿಸಿದ ವಿಮಾನದಲ್ಲಿ 140 ಪುರುಷರು, 34 ಮಹಿಳೆಯರು ಹಾಗೂ 4 ಮಕ್ಕಳು ಸೇರಿದಂತೆ ಒಟ್ಟು 178 ಪ್ರಯಾಣಿಕರಿದ್ದರು. ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿ ಬಂದಿಲಿದಿದ್ದಾರೆ.

Also Read  ಬೆಂಗಳೂರು: ಆರು ಸಾಧಕರಿಗೆ ಇನ್ಫೋಸಿಸ್ ಪ್ರಶಸ್ತಿ..!!

error: Content is protected !!
Scroll to Top