ಉಳ್ಳಾಲ: ಸಮುದ್ರದಲ್ಲಿ ತಾಂತ್ರಿಕ ದೋಷದಿಂದ ಸಿಲುಕಿದ ಮೀನುಗಾರಿಕಾ ಬೋಟ್

‌(ನ್ಯೂಸ್ ಕಡಬ) newskadaba.com ಉಳ್ಳಾಲ: ಜು.13, ಆಳ ಸಮುದ್ರದಲ್ಲಿ ಎರಡು ದಿನಗಳ ಹಿಂದೆ ಮೀನುಗಾರಿಕೆಗೆಂದು ತೆರಳಿದ್ದ ಬೋಟ್ ಹಿಂತಿರುಗುವ ಸಂದರ್ಭ ತಾಂತ್ರಿಕ ದೋಷ ಉಂಟಾದ ಘಟನೆ ಇಲ್ಲಿನ ಅಳಿವೆಬಾಗಿಲು ಸಮುದ್ರ ತೀರದಲ್ಲಿ ನಡೆದಿದೆ.

ಆ ಬೋಟ್ ನ್ನು ಇನ್ನೊಂದು ಬೋಟ್ ಮೂಲಕ ಹೋಗಿ ರಿಪೇರಿ ಮಾಡಿ ದಡಕ್ಕೆ ತರಲಾಗಿದೆ. ಉಳ್ಳಾಲ ಕೋಡಿ ಮೂಲದವರಿಗೆ ಸೇರಿದ ಈ ಬೋಟ್ ಎರಡು ದಿನಗಳ ಹಿಂದೆ ಆಳಸಮುದ್ರ ಮೀನುಗಾರಿಕೆಗೆಂದು ತೆರಳಿದ್ದು, ವಾಪಾಸಾಗುವ ಸಂದರ್ಭದಲ್ಲಿ ಇಂಜಿನ್ ಸಮಸ್ಯೆ ಉಂಟಾಗಿ ಪೆಟ್ರೋಲ್ ಖಾಲಿಯಾಗಿ ತೊಂದರೆ ಎದುರಾಗಿದೆ. ಕೂಡಲೇ ಕರಾವಳಿ ರಕ್ಷಣಾ ಪಡೆಗೆ ಮಾಹಿತಿ ಪಡೆಗೆ ನೀಡಲಾಗಿತ್ತು. ಸೋಮವಾರ ಮುಂಜಾನೆ ಮಂಜೇಶ್ವರದಿಂದ ಮತ್ತೊಂದು ಬೋಟ್ ನಲ್ಲಿ ಮೀನುಗಾರರು ತೆರಳಿ ಆ ಬೋಟ್ ನ್ನು ದಡಕ್ಕೆ ತಂದಿದ್ದಾರೆ. ಕರಾವಳಿ ರಕ್ಷಣಾ ಪಡೆ, ಉಳ್ಳಾಲ ಪೊಲೀಸರು ಸಹಕಾರ ನೀಡಿದರು.

Also Read  ರಾಜ್ಯಮಟ್ಟದ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ನಿಹಾರಿಕಾ ಹಾಗೂ ಶಿವಾನಿ ಡಿ.ಎ. ಕಡಬ ತಾಲೂಕಿಗೆ ಪ್ರಥಮ - ಸೈಂಟ್ ಜೋಕಿಮ್ಸ್ ಮತ್ತು ಸೈಂಟ್ ಆ್ಯನ್ಸ್ ಗೆ 100% ಫಲಿತಾಂಶ

error: Content is protected !!
Scroll to Top