ಮಂಡ್ಯದ ಡ್ರೋನ್ ಹುಡುಗನ ಹೊಸ ಕಥೆ ➤ ಆರೋಪ ನಿರಾಕರಿಸಿ ಸತ್ಯ ಶೀಘ್ರ ಬಹಿರಂಗಪಡಿಸುವೆ ಎಂದ ಪ್ರತಾಪ್

(ನ್ಯೂಸ್ ಕಡಬ) newskadaba.com.ಬೆಂಗಳೂರು,ಜು.12: ಹೊಸ ಆವಿಷ್ಕಾರ ಮೂಲಕ ದೇಶದ ಗಮನ ಸೆಳೆದ ಡ್ರೋನ್‌ ಪ್ರತಾಪ್‌ ಇ-ತ್ಯಾಜ್ಯಗಳನ್ನು ಬಳಸಿ ಡ್ರೋನ್ ತಯಾರಿಸುವ ಮೂಲಕ ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟದಲ್ಲಿ ನೂರಾರು ಪ್ರಶಸ್ತಿಗಳನ್ನು ಪಡೆದು ಕೀರ್ತಿಗಳಿಸಿದ್ದ ಮಂಡ್ಯದ ಹುಡುಗನ ಬಗ್ಗೆ ಸಾಕಷ್ಟು ಅಪವಾದಗಳು ಕೇಳಿಬರುತ್ತಿದೆ.

ಈತ ಹೇಳಿದ್ದೆಲ್ಲವೂ ಸುಳ್ಳು, ಈತನ ಸಾಧನೆ ಝಿರೋ, ಯಾವ ಪ್ರಶಸ್ತಿಗಳೂ ಈತನಿಗೆ ಸಿಕ್ಕಿಲ್ಲ, ಮಠಾಧೀಶರು, ಚಿತ್ರನಟರಿಂದ ಹಿಡಿದು ರಾಜಕೀಯ ಮುಖಂಡರವರನ್ನೂ ಈತ ಯಾಮಾರಿಸಿದ್ದಾನೆ ಎಂಬ ವಿವಾದ ಇದಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈತ ಭಾಗವಹಿಸಿರುವುದಾಗಿ ಈತನ ಬಳಿ ಇರುವ ದಾಖಲೆಗಳೆಲ್ಲವೂ ನಕಲಿಯದ್ದು, ಇದನ್ನೇ ಇಟ್ಟುಕೊಂಡು ಲಕ್ಷಾಂತರ ರೂಪಾಯಿ ದುಡ್ಡು ಪಡೆದಿದ್ದಾನೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ನಡುವೆಯೇ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಪ್ರತಾಪ್‌ ತನ್ನ ಮೇಲೆ ಬಂದಿರುವ ಎಲ್ಲಾ ಆರೋಪಗಳನ್ನೂ ನಿರಾಕರಿಸಿದ್ದಾನೆ.

ನಾನು 40 ಕ್ಕೂ ಅಧಿಕ ದೇಶ ಸುತ್ತಿದ್ದೇನೆ. ಎಲ್ಲ ದಾಖಲೆಗಳೂ ನನ್ನ ಬಳಿ ಇವೆ. ಜಪಾನ್‌ನ ಟೋಕಿಯೊದಲ್ಲಿ 2017ರಲ್ಲಿ ನಡೆದಿರುವ ಅಂತಾರಾಷ್ಟ್ರೀಯ ಮಟ್ಟದ ರೋಬೋಟಿಕ್‌ ಷೋನಲ್ಲಿ ಭಾಗವಹಿಸಿ ಮೊದಲ ಸ್ಥಾನ ಗಳಿಸಿದ್ದೇನೆ. ಗಣ್ಯಾತಿಗಣ್ಯರನ್ನು ಭೇಟಿ ಮಾಡಿದ್ದೇನೆ. ಎಲ್ಲದರ ಬಗ್ಗೂ ನನ್ನ ಬಳಿ ದಾಖಲೆ ಇದ್ದು, ಅದನ್ನು ನಾನು ತೋರಿಸಲು ಸಿದ್ಧ. ಅಷ್ಟೇ ಅಲ್ಲದೇ, ನಾನು ತಯಾರಿಸಿರುವ ಡ್ರೋನ್‌ ಬಲು ವಿಶಿಷ್ಟವಾಗಿದ್ದು, ಅದನ್ನು ನೆರೆ ಹಾವಳಿ ಸಂದರ್ಭದಲ್ಲಿ ಬಳಸುಂಥದ್ದಾಗಿದೆ. ಜನರು ಪ್ರವಾಹದಲ್ಲಿ ಸಿಲುಕಿದಾಗ ಅವರು ಎಲ್ಲಿದ್ದಾರೆ ಎಂಬ ಬಗ್ಗೆ ನನ್ನ ಡ್ರೋನ್‌ ಸ್ಪಷ್ಟ ಮಾಹಿತಿ ನೀಡುತ್ತದೆ. ಥರ್ಮಲ್‌ ಸೆನ್ಸ್‌ ಬಳಸಿ ಡ್ರೋನ್‌ ಜನರನ್ನು ಪತ್ತೆ ಹಚ್ಚುತ್ತದೆ. ಉತ್ತರ ಕರ್ನಾಟಕದಲ್ಲಿ ನೆರೆ ಪ್ರವಾಹ ಬಂದಾಗಲೂ ನನ್ನದೇ ಡ್ರೋನ್‌ ಬಳಕೆಯಾಗಿತ್ತು. ಈ ಮೂಲಕ ಅಪಾರ ಜನರ ರಕ್ಷಣೆ ಮಾಡಲಾಗಿತ್ತು ಎಂದು ಪ್ರತಾಪ್‌ ಹೇಳಿದ್ದಾನೆ.

Also Read  ರಸ್ತೆ ಬದಿ ನಿಂತಿದ್ದ ಲಾರಿಗೆ ಓಮ್ನಿ ಢಿಕ್ಕಿ ➤ ಮೂವರ ದುರ್ಮರಣ

ತಮ್ಮ ಜತೆ ಸೇರಿಕೊಂಡು ಕೆಲಸ ಮಾಡುವಂತೆ ಕೆಲವು ಕಂಪನಿಗಳು ನನಗೆ ಆಫರ್‌ ನೀಡಿದ್ದವು. ನನ್ನ ಡ್ರೋನ್‌ ಕೊಡುವಂತೆ ಅವರು ಕೇಳಿದ್ದರು. ಆದರೆ ನಾನು ಅದನ್ನು ನಿರಾಕರಿಸಿದ್ದೆ. ಬಹುಶಃ ಅಲ್ಲಿಂದಲೇ ಈ ವಿವಾದ ಶುರುವಾಗಿದೆ. ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳು ಬಂದಿವೆ ಎಂದು ಸ್ಪಷ್ಟನೆ ನೀಡಿದ್ದಾನೆ ನನ್ನ ಬಳಿ ಎಲ್ಲಾ ದೇಶಗಳ ಸರ್ಟಿಫಿಕೇಟ್‌, ಮೆಡಲ್‌ ಇವೆ. ಪಾಸ್‌ಪೋರ್ಟ್‌ನಲ್ಲಿಯೂ ನಾನು ವಿದೇಶಗಳಿಗೆ ಹೋಗಿರುವ ದಾಖಲೆಗಳು ಇವೆ. ಎಲ್ಲವನ್ನೂ ಇನ್ನೊಂದು ವಾರದಲ್ಲಿ ಪ್ರೆಸ್‌ಮೀಟ್‌ ಮಾಡಿ ಜನರ ಮುಂದೆ ಇಡುತ್ತೇನೆ ಎಂದು ತಿಳಿಸಿದ್ದಾನೆ.

Also Read  ಸುರತ್ಕಲ್: ಗುಡ್ಡ ಕುಸಿತ…!!   ➤  ಓರ್ವ ಮೃತ್ಯು, ಇನ್ನೋರ್ವನಿಗೆ ಗಂಭೀರ ಗಾಯ

error: Content is protected !!
Scroll to Top