ಭಾರತ-ದುಬೈ ಉಭಯ ದೇಶಗಳ ನಡುವೆ ವಿಶೇಷ ವಿಮಾನ ➤ ಜುಲೈ 12ರಿಂದ 26ರ ವರೆಗೆ ಹಾರಾಟ

(ನ್ಯೂಸ್ ಕಡಬ)newskadaba.com ನವದೆಹಲಿ, ಜು 11, ಜುಲೈ 12 ರಿಂದ ಜುಲೈ 26 ರವರೆಗೆ ಎರಡು ದೇಶಗಳ ನಡುವಿನ ವಿಶೇಷ ವಿಮಾನಗಳ ಹಾರಾಟ ನಡೆಸಲು ಉಭಯ ದೇಶಗಳ ನಾಗರಿಕ ವಿಮಾನಯಾನ ಅಧಿಕಾರಿಗಳು ಒಪ್ಪಿಗೆ  ನೀಡಿದ್ದಾರೆ.

ಇದರಂತೆ, ದುಬೈನ ಭಾರತೀಯ ನಿವಾಸಿಗಳನ್ನು ತವರಿಗೆ ಕರೆತರಲು ಚಾರ್ಟರ್ಡ್ ವಿಮಾನಗಳಿಗೆ ಐಸಿಎ ಅನುಮೋದಿತ ದುಬೈ ನಿವಾಸಿಗಳನ್ನು ತವರಿಗೆ ಕರೆತರಲು ಅನುಮತಿ ನೀಡಲಾಗುವುದು ಎಂದು ತಿಳಿಸಿದೆ. ಅಲ್ಲದೇ, ದುಬೈಯಿಂದ ಭಾರತೀಯರನ್ನು ಮರಳಿ ಕರೆತರಲು ವಿಶೇಷ ವಿಮಾನಗಳ ಭಾರತೀಯ ವಾಹಕಗಳಿಗೆ ಐಸಿಎ ಅನುಮೋದಿತ ದುಬೈ ನಿವಾಸಿಗಳನ್ನು ಭಾರತದಿಂದ ಕೊಲ್ಲಿ ದೇಶಕ್ಕೆ ಸಾಗಿಸಲು ಅನುಮತಿ ನೀಡಲಾಗುವುದು.

ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಸಹಭಾಗಿತ್ವ ಹಿನ್ನೆಲೆ ಮತ್ತು ಪ್ರಸ್ತುತ ಭಾರತದಲ್ಲಿರುವ ದುಬೈ ನಿವಾಸಿಗಳಿಗೆ ವಾಪಾಸು ಹಿಂದಿರುಗಲು ಸಹಾಯ ಮಾಡುವ ಉದ್ದೇಶದಿಂದ, ಎರಡೂ ದೇಶಗಳ ನಾಗರಿಕ ವಿಮಾನಯಾನ ಅಧಿಕಾರಿಗಳು ವಿಶೇಷ ವ್ಯವಸ್ಥೆಯನ್ನು ಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.

error: Content is protected !!

Join the Group

Join WhatsApp Group