ಬಾವಿಗೆ ಬಿದ್ದ ಕಾಡುಕೋಣ ; ರಕ್ಷಣೆ

(ನ್ಯೂಸ್ ಕಡಬ)newskadaba.com ಕುಂದಾಪುರ, ಜು.11, ತಾಲೂಕಿನ ಉಳ್ಳೂರು 74 ಗ್ರಾಮದ ಶಿವರಾಮ ಶೆಟ್ಟಿಯವರ ಮನೆಯ ಬಾವಿಗೆ ಕಾಡುಕೋಣವೊಂದು ಬಿದ್ದಿದ್ದು, ಸ್ಥಳೀಯರು, ಅರಣ್ಯ ಇಲಾಖಾ ಸಿಬ್ಬಂದಿಗಳ ಸಹಕಾರದಿಂದ ಕಾಡುಕೋಣವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ಅರಣ್ಯಕ್ಕೆ ಬಿಡಲಾಗಿದೆ.

12 ವರ್ಷದ ಕಾಡೆಮ್ಮೆ ಆಳವಾದ ಬಾವಿಗೆ ಬಿದ್ದಿದ್ದು, ಬಾವಿ ಆಳವಿದ್ದುದರಿಂದ ಕಾಡೆಮ್ಮೆಗೆ ಮೇಲೆ ಬರಲು ಸಾಧ್ಯವಾಗಲಿಲ್ಲ. ಇದನ್ನು ಕಂಡ ಸ್ಥಳೀಯರು ಹಾಗೂ ಆರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಕಾಡುಕೋಣವನ್ನು ಮೇಲೆತ್ತಿದರು.

ಜೆಸಿಬಿ ಮೂಲಕ ಸಾಕಷ್ಟು ಅಗಲದ ಕಾಲುವೆ ಕೊರೆದು, ಕಾಡುಕೋಣಕ್ಕೆ ಎರಡು ಕಡೆಗಳಿಂದ ಹಗ್ಗ ಕಟ್ಟಿ ಮೇಲೆತ್ತಲಾಯಿತು. ಬಾವಿ ಕಾಡು ಸಮೀಪದಲ್ಲಿ ಇರುವುದರಿಂದ ಬಾವಿಯಿಂದ ಸುರಕ್ಷಿತವಾಗಿ ಮೇಲೆ ಬಂದ ಕಾಡುಕೋಣ ಕಾಡಿಗೆ ಹೋಯಿತು.

Also Read  10 ವರ್ಷಗಳ ನಂತರ ಕೊನೆಗೂ ಉದ್ಘಾಟನೆಗೊಂಡ ಪಂಪ್ ವೆಲ್ ➤ ಸದ್ದುಮಾಡುತ್ತಿದೆ ಫ್ಲೈಓವರ್ ಉದ್ಘಾಟನಾ ಟ್ರೋಲ್ ವೀಡಿಯೋ

error: Content is protected !!
Scroll to Top