ಜೋಗಿಬೆಟ್ಟು ಬ್ರಾಂಚ್ ಗೆ ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಇದರ ಪ್ರಧಾನ ಕಾರ್ಯದರ್ಶಿ ಶಾಫಿ ಸಹದಿ ಭೇಟಿ

(ನ್ಯೂಸ್ ಕಡಬ)newskadaba.com ಎಸ್ಸೆಸ್ಸೆಫ್ ಮತ್ತು ಎಸ್ ವೈ ಎಸ್ ಮುಸ್ಲಿಂ ಜಮಾಅತ್ ಜೋಗಿಬೆಟ್ಟು ಬ್ರಾಂಚಿಗೆ ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಇದರ ಪ್ರಧಾನ ಕಾರ್ಯದರ್ಶಿ ರಾಜ್ಯ ವಕ್ಫ್ ಬೋರ್ಡಿನ ಸದಸ್ಯರು ಇಹ್ಸಾನ್ ರಾಜ್ಯ ಅಧ್ಯಕ್ಷರು ಬಹು ಮೌಲಾನ ಶಾಫಿ ಸಹದಿ ಬೆಂಗಳೂರು ಬೇಟಿಕೊಟ್ಟರು.

ಕಾರ್ಯಕರ್ತರನ್ನು ಹುರಿದುಂಬಿಸಿ ಅಲ್ಲಿಯ ಕಾರ್ಯ ಚಟುವಟಿಕೆಯನ್ನು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಸಂಘಟನೆಯಲ್ಲಿ ಹೇಗೆ ಕಾರ್ಯನಿರ್ವಹಿಸ ಬೇಕೆಂದು ಸಲಹೆ ಸೂಚನೆಗಳನ್ನ ನೀಡಿದರು. ಉಸ್ತಾದರು ಇಲ್ಲಿಯ ಸಂಘಟನೆಯಲ್ಲಿ ನಡೆಯುವ ಸಾಂತ್ವನ ಹಾಗೂ ಇನ್ನಿತರ ಕಾರ್ಯ ಚಟುವಟಿಕೆಗಳನ್ನು ಅರಿತು ಮುಕ್ತ ಕಂಠದಿಂದ ಶ್ಲಾಘಿಸಿದರು. ಉಸ್ತಾದರನ್ನು ನಮ್ಮ ಎಲ್ಲಾ ಸಂಘಟನೆಗಳ ‌ನಾಯಕರು, ಕಾರ್ಯಕರ್ತರು ಸೇರಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಎಸ್ ವೈ ಎಸ್ ಅಧ್ಯಕ್ಷರು ಓ.ಕೆ ಸಈದ್ ಉಸ್ತಾದ್ ವಹಿಸಿದ್ದರು. ಉಧ್ಘಾಟನೆಯನ್ನು ಅಶ್ರಫ್ ಸಖಾಫಿ ಮೂಡಡ್ಕ ನಿರ್ವಹಿಸಿದರು. ವೇದಿಕೆಯಲ್ಲಿ ಅಬ್ದುಲ್ ಹಮೀದ್ ಮುಸ್ಲಿಯಾರ್, ಕರೀಂ ಹಾಜಿ, ಮುಹಮ್ಮದಲಿ ಸಖಾಫಿ, ಸೂಪಿ ಕೋಡಿಬೆಟ್ಟು, ಅಬ್ದುಲ್ ಖಾದರ್ ಮುಸ್ಲಿಯಾರ್, ಬಶೀರ್ ಮದನಿ, ಜಿ.ಎಂ. ಕುಂಞಿ, ಅಬ್ದುಲ್ ಸಾಬಿತ್, ಶಾಹಿದ್ ಸಖಾಫಿ, ಕೆಸಿಎಫ್ ಮೆಂಬರ್ ಶರೀಫ್ ಹಾಗೂ ಇರ್ಷಾದ್ ಮತ್ತು ಎಸ್ಸೆಸ್ಸೆಫ್, ಎಸ್ ವೈ ಎಸ್, ಎಸ್ ಬಿ ಎಸ್ ನ ಕಾರ್ಯಕರ್ತರು ಪಾಲ್ಗೊಂಡಿದ್ದರು. ಅಬ್ದುಸ್ಸಮದ್ ಸಖಾಫಿ ಸ್ವಾಗತಿಸಿ ವಂದಿಸಿದರು. ಸಭಾ ಕಾರ್ಯಕ್ರಮವು ಎಸ್ ವೈ ಎಸ್ ಸೆಂಟರ್ ಅಧ್ಯಕ್ಷರಾದ ಜಿ ಎಂ ಕುಂಞಿ ನಿವಾಸದಲ್ಲಿ ಜರಗಿತು.

Also Read  ಕಡಬ ಮತ್ತು ಪುತ್ತೂರು ಉಭಯ ತಾಲೂಕಿನ ಕೊರೋನ ಅಪ್ ಡೇಟ್

error: Content is protected !!
Scroll to Top