ಬಂಟ್ವಾಳ: ಒಂದೇ ದಿನ 16 ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ)newskadaba.com ಬಂಟ್ವಾಳ: ಜು.11, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಜಿಲ್ಲೆಯ ಬಂಟ್ವಾಳ ತಾಲೂಕು ಕೂಡಾ ಕೋವಿಡ್ ಭೀತಿ ಎದುರಿಸುತ್ತಿದೆ. ತಾಲೂಕಿನ ಪುದು ಗ್ರಾಮದಲ್ಲಿ ಒಂದೇ ದಿನ 16 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.

ಗ್ರಾಮದ ಒಂದು ಮನೆಯ 12 ಜನರಿಗೆ ಹಾಗೂ ಇನ್ನೊಂದು ಮನೆಯ ನಾಲ್ಕು ಮಂದಿಗೆ ಸೋಂಕು ದೃಢಪಟ್ಟಿದೆ. ಕಳೆದ ಕೆಲವು ದಿನಗಳ ಹಿಂದೆ ಈ ಎರಡೂ ಮನೆಗಳ ಸದಸ್ಯರಿಗೆ ಸೋಂಕು ದೃಢಪಟ್ಟಿತ್ತು. ಇವರ ಸಂಪರ್ಕದ ಕಾರಣದಿಂದ ಸೋಂಕು ದೃಢವಾಗಿದೆ ಎನ್ನಲಾಗಿದೆ.

Also Read  ದಕ್ಷಿಣ ಕನ್ನಡ ಜಿಲ್ಲೆಗೆ ‘ಡೆಲ್ಟಾ’ಪ್ಲಸ್ ಭೀತಿ..?!!

error: Content is protected !!
Scroll to Top