?? ?ig Breaking News ಕಡಬದಲ್ಲಿ ಮತ್ತೆ ವಕ್ಕರಿಸಿದ ಕೊರೋನಾ ➤ ರೈಲ್ವೇ ಉದ್ಯೋಗಿಯಲ್ಲಿ ಕೊರೋನಾ ದೃಢ

(ನ್ಯೂಸ್ ಕಡಬ)newskadaba.com ನೆಟ್ಟಣ: ಜು.10, ಕಡಬದಲ್ಲಿ ಕೊರೋನಾ ಪ್ರಕರಣಗಳು ಮತ್ತೆ ಮತ್ತೆ ಹೆಚ್ಚುತ್ತಲೇ ಇದ್ದು, ಇಂದು ರೈಲ್ವೇ ಸಿಬ್ಬಂದಿಯೋರ್ವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಬಿಹಾರ ಮೂಲದ 22 ವರ್ಷ ಪ್ರಾಯದ ವ್ಯಕ್ತಿಯು ನೆಟ್ಟಣದ ರೈಲ್ವೇ ಕ್ವಾರ್ಟರ್ಸ್ ನಲ್ಲಿ ವಾಸವಾಗಿದ್ದರು. ಬಿಹಾರದಿಂದ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿ ಬಳಿಕ ನೆಟ್ಟಣದಲ್ಲಿ ಹೋಮ್ ಕ್ವಾರಂಟೈನ್ ನಲ್ಲಿದ್ದರು ಎನ್ನಲಾಗಿದೆ. ಕಂದಾಯ ಅಧಿಕಾರಿಗಳು ಸೋಂಕಿತ ವ್ಯಕ್ತಿಯ ಮನೆಯನ್ನು ಸೀಲ್ ಡೌನ್ ಮಾಡಿದ್ದಾರೆ.

error: Content is protected !!
Scroll to Top