(ನ್ಯೂಸ್ ಕಡಬ)newskadaba.com ಮಂಗಳೂರು, ಜು. 10, ಪರಿಶಿಷ್ಟ ಪಂಗಡದ ಯುವಕ, ಯುವತಿಯರು ಪರಿಶಿಷ್ಟ ಪಂಗಡ ಸಮುದಾಯದ ಒಳಗೆ ಅಂತರ್ ಜಾತಿ ವಿವಾಹವಾದಲ್ಲಿ ಪ್ರೋತ್ಸಾಹ ಧನ ಮಂಜೂರಾತಿಗೆ ಅರ್ಜಿ ಆಹ್ವಾನಿಸಿದೆ.
ಯುವತಿಗೆ ಕನಿಷ್ಠ 18 ವರ್ಷ, ಗರಿಷ್ಟ 42 ವರ್ಷ, ಯುವಕನಿಗೆ ಕನಿಷ್ಟ 21 ವರ್ಷದಿಂದ ಗರಿಷ್ಟ 45 ವರ್ಷವಾಗಿರಬೇಕು. ವಾರ್ಷಿಕ ಆದಾಯ ರೂ. 2 ಲಕ್ಷ ಮೀರಬಾರದು, ಮದುವೆಯಾದ ಒಂದು ವರ್ಷದ ಅವಧಿಯೊಳಗೆ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಉಪನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹ ನೋಂದಣಿ ಪ್ರಮಾಣ ಪತ್ರವನ್ನು ಪಡೆದಿರಬೇಕು. ಪರಿಶಿಷ್ಟ ಪಂಗಡದ ಸಮುದಾಯದ ಒಳಗೆ ಅಂತರ್ ಜಾತಿ ವಿವಾಹವಾದ ಯುವಕ ವಾಸ್ತವ್ಯವಿರುವ ಜಿಲ್ಲೆಯಲ್ಲಿ ಮಾತ್ರ ಅವಕಾಶ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮದಡಿ ಅಂತರ್ ಜಾತಿ ವಿವಾಹ ಅಥವಾ ವಿಧವೆಯರ ಮರುವಿವಾಹ ಯೋಜನೆಗಳಡಿ ಪ್ರೋತ್ಸಾಹಧನ ಪಡೆದವರು ಅರ್ಹರವಾಗಿರುವುದಿಲ್ಲ. ಅನುಸೂಚಿತ ಬುಡಕಟ್ಟುಗಳ ಪಟ್ಟಿಯಲ್ಲಿ ಒಂದೇ ಸಂಖ್ಯೆಯಲ್ಲಿ ನಮೂದಿಸಿರುವ ಸಮನಾಂತರ ಜಾತಿಗಳ ಒಳಗೆ ಮದುವೆಯಾದವರು ಅರ್ಹರಿರುವುದಿಲ್ಲ. ಅಂತರ್ ಜಾತಿ ವಿವಾಹವಾದಲ್ಲಿ ಅಂತಹ ದಂಪತಿಗಳಿಗೆ ರೂ. 2 ಲಕ್ಷ ನೀಡಲಾಗುವುದು. ಪರಿಶಿಷ್ಟ ಪಂಗಡದ ಸಮುದಾಯದ ಯುವಕ, ಯುವತಿಯರು ಸರಳ ವಿವಾಹ ಕಾರ್ಯಕ್ರಮದಡಿ ವಿವಾಹವಾದಲ್ಲಿ ಅಂತರ್ಹರರು ಈ ಯೋಜನೆಯಡಿಯಲ್ಲಿ ಸರಳವಿವಾಹದ ರೂ. 50 ಸಾವಿರ ಹೊರತುಪಡಿಸಿ ಉಳಿದ ರೂ. 1.50 ಲಕ್ಷ ಪ್ರೋತ್ಸಾಹ ಧನವನ್ನು ಪಡೆಯಲು ಅರ್ಹರಿರುತ್ತಾರೆ.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು: ದಂಪತಿಗಳ ಜಾತಿ ಪ್ರಮಾಣ ಪತ್ರ, ವಾರ್ಷಿಕ ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಡಿತರ ಚೀಟಿ, ಜನನ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ವಿವಾಹ ಆಮಂತ್ರಣ ಪತ್ರಿಕೆ, ವಾಸ್ತವ್ಯ ದೃಢೀಕರಣ ಪತ್ರ, ಜಂಟಿ ಖಾತೆ ಬ್ಯಾಂಕ್ ಪುಸ್ತಕ ಸಲ್ಲಿಸಬೇಕು. ಸುಳ್ಳು ಮಾಹಿತಿ ಹಾಗೂ ನಕಲಿ ದಾಖಲೆಗಳನ್ನು ಸಲ್ಲಿಸಿದಲ್ಲಿ ಮಂಜೂರಾದ ಹಣವನ್ನು ಸರ್ಕಾರ ವಾಪಾಸ್ ಕಟ್ಟುವ ಬಗ್ಗೆ ಮತ್ತು ಶಿಕ್ಷೆಗೆ ಒಳಪಡಲು ಸಿದ್ದರಿರುವ ಬಗ್ಗೆ ಪ್ರಮಾಣ ಪತ್ರ ರೂ. 20 ಛಾಪಾ ಕಾಗದದಲ್ಲಿ ಬರೆದು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಬಂಟ್ವಾಳ ಸಮಾಜ ಕಲ್ಯಾಣ ಇಲಾಖೆ ಕಚೇರಿ ದೂರವಾಣಿ ಸಂಖ್ಯೆ; 08255-230986 ಸಂಪರ್ಕಿಸುವಂತೆ ಬಂಟ್ವಾಳ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು(ಗ್ರೇಡ್-1) ರ ಪ್ರಕಟಣೆ ತಿಳಿಸಿದೆ.