(ನ್ಯೂಸ್ ಕಡಬ) newskadaba.com.ಬೆಳ್ತಂಗಡಿ,ಜು.10: ಚಾರ್ಮಾಡಿ ಘಾಟಿ ರಸ್ತೆ ಮಳೆಗಾಲದ ಸಂದರ್ಭ ಅಪಾಯವಿರುವುದರಿಂದ ರಸ್ತೆಯಲ್ಲಿ ಸಂಜೆ 7ರಿಂದ ಬೆಳಗ್ಗೆ 7ರ ತನಕ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ| ಗೌತಮ್ ಬಗಾದಿ ಆದೇಶ ಹೊರಡಿಸಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಭಾರೀ ಮಳೆಯಿಂದಾಗಿ ರಸ್ತೆ ಸಂಪೂರ್ಣ ಹಾನಿಗೀಡಾಗಿತ್ತು. ಕಳೆದ ವರ್ಷ ತಾತ್ಕಾಲಿಕ ಕಾಮಗಾರಿ ನಡೆಸಿ ಬೇಸಗೆಯಲ್ಲಿ ಲಘು ವಾಹನಗಳಿಗೆ ಮಾತ್ರ ಕಲ್ಪಿಸಿಕೊಡಲಾಗಿತ್ತು. ಈ ಬಾರಿಯೂ ಅಲ್ಲಲ್ಲಿ ಮಣ್ಣು ಕುಸಿಯಲು ಪ್ರಾರಂಭವಾಗಿರುದರಿಂದಾಗಿ ರಾತ್ರಿ ಸಂಚಾರ ಸೂಕ್ತವಲ್ಲ ಮುಂದಿನ ಆದೇಶದವರೆಗೂ ಈ ಸಂಚಾರ ನಿಷೇಧ ಇರುತ್ತದೆ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಎಂದು ತಿಳಿಸಿದರು.