ವಿಪತ್ತು ನಿರ್ವಹಣೆಗೆ ಸಿದ್ದತೆ ಅಗತ್ಯ ➤ ಶ್ರೀ ಗೋಪಾಲ್ ಲಾಲ್ ಮೀನಾ

(ನ್ಯೂಸ್ ಕಡಬ)newskadaba.com ಜು.9, ನಗರದ ಮೇರಿಹಿಲ್‍ನಲ್ಲಿರುವ ಜಿಲ್ಲಾ ಗೃಹರಕ್ಷಕ ದಳದ ಕಛೇರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಇದರ ವಿಜಯವಾಡ ಘಟಕದ ಮುಖ್ಯ ಕಮಾಡೆಂಟ್ ಶ್ರೀ ಗೋಪಾಲ್‍ ಲಾಲ್ ಮೀನಾ ಭೇಟಿ ನೀಡಿದರು.

 

ಅವರು ಮಳೆಗಾಲದ ಸಂದರ್ಭದಲ್ಲಿ ಉಂಟಾಗುವ ಪ್ರಾಕೃತಿಕ ತೊಂದರೆಗಳು ಮತ್ತು ವಿಪತ್ತು ನಿರ್ವಹಣೆ ವಿಚಾರವಾಗಿ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಮತ್ತು ಜಿಲ್ಲಾ ಪೌರರಕ್ಷಣಾ ತಂಡದ ಮುಖ್ಯಪಾಲಕರಾದ ಡಾ|| ಮುರಲೀಮೋಹನ ಚೂಂತಾರು ಅವರೊಂದಿಗೆ ವಿಚಾರ ವಿನಿಮಯ ಮಾಡಿದರು. ನಂತರ ಗೃಹರಕ್ಷಕ ದಳದ ವಿಪತ್ತು ನಿರ್ವಹಣಾ ತಂಡದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ, ವಿಪತ್ತು ನಿರ್ವಹಣೆ ಯಶಸ್ವಿಯಾಗಲು ಸಾಕಷ್ಟು ಪೂರ್ವ ತಯಾರಿ ಮತ್ತು ಪೂರ್ವ ಸಿದ್ಧತೆ ಅವಶ್ಯವಿದೆ ಎಂದರು. ಭೌಗೋಳಿಕ ಹಿನ್ನೆಲೆ ತಿಳಿದಿರುವ ತರಬೇತಿ ಹೊಂದಿದ ಗೃಹರಕ್ಷಕರು ಮತ್ತು ಪೌರರಕ್ಷಣಾ ಕಾರ್ಯಕರ್ತರು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಕ್ಕೆ ಬಹಳ ಉಪಯುಕ್ತ ಎಂದು ಅಭಿಪ್ರಾಯಪಟ್ಟರು. ಶ್ರೀ ಗೋಪಾಲ್‍ಲಾಲ್ ಮೀನಾ ಅವರನ್ನು ಗೌರವಿಸಲಾಯಿತು. ಕಛೇರಿ ಅಧೀಕ್ಷಕರಾದ ಶ್ರೀ ರತ್ನಾಕರ್, ಅನಿತಾ, ಸುಲೋಚನಾ ದಿವಾಕರ್, ಮಹೇಶ್, ಸುನಿಲ್, ಲಿಂಗಪ್ಪ ಮುಂತಾದವರು ಉಪಸ್ಥಿತರಿದ್ದರು.

Also Read  ಮತದಾರರ ಪಟ್ಟಿಯ ಪರಿಷ್ಕರಣೆ ಆರಂಭ              ಜಿಲ್ಲಾ ಚುನಾವಣಾಧಿಕಾರಿ ಮನವಿ            

error: Content is protected !!
Scroll to Top